ಪಿಂಕ್ ಒನ್'ಡೇ ಗೆದ್ದರೂ ಆಫ್ರಿಕಾ ತಂಡಕ್ಕೆ ನಿರಾಸೆ..!

First Published 11, Feb 2018, 10:20 PM IST
South Africa fined for slow over rate in fourth ODI
Highlights

ಐಸಿಸಿ ನಿಯಮ 2.5.1ರ ಪ್ರಕಾರ ಪಂದ್ಯ ಸ್ವಲ್ಪ ಸಮಯ ತಡವಾಗಲು ಕಾರಣರಾದ ಆಟಗಾರರಿಗೆ ಸಂಭಾವನೆಯ ಶೇ.10 ಹಾಗೂ ನಾಯಕನಿಗೆ ಅದರ ದುಪ್ಪಟ್ಟು ದಂಡವನ್ನು ವಿಧಿಸಲಾಗಿದೆ. ಇನ್ನು 12 ತಿಂಗಳೊಳಗಾಗಿ ಮಾರ್ಕ್'ರಮ್ ನೇತೃತ್ವದಲ್ಲಿ ತಂಡ ಇದೇ ತಪ್ಪು ಮಾಡಿದರೆ, ನಾಯಕ ನಿಷೇಧದ ಶಿಕ್ಷೆಗೂ ಒಳಗಾಗುವ ಸಾಧ್ಯತೆಯಿದೆ.

ಜೊಹಾನ್ಸ್‌'ಬರ್ಗ್(ಫೆ.11): ಭಾರತ ವಿರುದ್ಧದ 4ನೇ ಏಕದಿನ ಪಂದ್ಯದ ವೇಳೆ ನಿಧಾನ ಗತಿ ಬೌಲಿಂಗ್ ಮಾಡಿದ ತಪ್ಪಿಗೆ ದಕ್ಷಿಣ ಆಫ್ರಿಕಾಕ್ಕೆ ದಂಡ ವಿಧಿಸಲಾಗಿದೆ.

ಪಿಂಕ್ ಒನ್'ಡೇ ವೇಳೆ ನಿಗದಿತ ಸಮಯಕ್ಕಿಂತ ತಡವಾಗಿ ಒಂದು ಓವರ್ ಬೌಲಿಂಗ್ ಮಾಡಿದ ಕಾರಣ ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮಾರ್ಕ್‌'ರಮ್‌'ಗೆ ಪಂದ್ಯದ ಸಂಭಾವನೆ ಶೇ. 20ರಷ್ಟು ಹಾಗೂ ಉಳಿದ ಆಟಗಾರರಿಗೆ ಶೇ.10ರಷ್ಟು ದಂಡವನ್ನು ಪಂದ್ಯದ ರೆಫ್ರಿ ಆ್ಯಂಡಿ ಪೈಕ್ರೊಫ್ಟ್ ವಿಧಿಸಿದ್ದಾರೆ.

ಐಸಿಸಿ ನಿಯಮ 2.5.1ರ ಪ್ರಕಾರ ಪಂದ್ಯ ಸ್ವಲ್ಪ ಸಮಯ ತಡವಾಗಲು ಕಾರಣರಾದ ಆಟಗಾರರಿಗೆ ಸಂಭಾವನೆಯ ಶೇ.10 ಹಾಗೂ ನಾಯಕನಿಗೆ ಅದರ ದುಪ್ಪಟ್ಟು ದಂಡವನ್ನು ವಿಧಿಸಲಾಗಿದೆ. ಇನ್ನು 12 ತಿಂಗಳೊಳಗಾಗಿ ಮಾರ್ಕ್'ರಮ್ ನೇತೃತ್ವದಲ್ಲಿ ತಂಡ ಇದೇ ತಪ್ಪು ಮಾಡಿದರೆ, ನಾಯಕ ನಿಷೇಧದ ಶಿಕ್ಷೆಗೂ ಒಳಗಾಗುವ ಸಾಧ್ಯತೆಯಿದೆ.

6 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 3-1ರ ಮುನ್ನಡೆ ಸಾಧಿಸಿದ್ದು, ಐದನೇ ಪಂದ್ಯ ಫೆ.13ರಂದು ಫೋರ್ಟ್'ಎಲಿಜಬೆತ್'ನಲ್ಲಿ ನಡೆಯಲಿದೆ.  

loader