ಈ ಸರಣಿ ಸೋಲಿನ ಬಳಿಕ ಮೂರು ಅಂಕ ಕುಸಿತ ಕಂಡು ಆರನೇ ಸ್ಥಾನದಲ್ಲಿದೆ.

ಜೋಹಾನ್ಸ್'ಬರ್ಗ್(ಫೆ.11): ಆರಂಭಿಕರಾದ ಕ್ವಿಂಟಾನ್ ಡಿ'ಕಾಕ್ ಹಾಗೂ ಹಶೀಂ ಆಮ್ಲಾ ಅವರ ಭರ್ಜರಿ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಐದನೇ ಪಂದ್ಯದಲ್ಲೂ ಜಯಭೇರಿ ಬಾರಿಸಿದೆ. ಈ ಮೂಲಕ ಏಕದಿನ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್'ಸ್ವೀಪ್ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್'ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಲಂಕಾ ವಿರುದ್ಧ 88 ರನ್'ಗಳ ಅಂತರದಲ್ಲಿ ಹರಿಣಗಳ ಪಡೆ ಜಯದ ನಗೆ ಬೀರಿತು. ಈ ವಿಜಯದ ಮೂಲಕ ಆಸ್ಟ್ರೇಲಿಯಾ ತಂಡವನ್ನು ಒಂದು ಅಂಕದಿಂದ ಹಿಂದಿಕ್ಕುವ ಮೂಲಕ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನಕ್ಕೆ ಲಗ್ಗೆಯಿಟ್ಟಿತು.

ಈ ವರ್ಷ ನಮ್ಮ ಪಾಲಿಗೆ ಅತಿ ಮುಖ್ಯವಾಗಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ಸರಣಿ ವಿಜಯದ ಬಳಿಕ ನಾಯಕ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

2002ರಿಂದ ಶ್ರೇಯಾಂಕ ವ್ಯವಸ್ಥೆ ಜಾರಿಗೆ ಬಂದ ನಂತರ ದಕ್ಷಿಣ ಆಫ್ರಿಕಾ ತಂಡ ಐದನೇ ಬಾರಿಗೆ ಅಗ್ರ ಸ್ಥಾನಕ್ಕೆ ಲಗ್ಗೆಯಿಟ್ಟಂತಾಗಿದೆ. ಈ ಮೊದಲು ಫೆಬ್ರವರಿ 2007, ಮಾರ್ಚ್-ಮೇ 2008, ಜನವರಿ-ಆಗಸ್ಟ್ 2009 ಹಾಗೂ ಅಕ್ಟೋಬರ್- ನವೆಂಬರ್ 2014.

ಈ ಸರಣಿ ಸೋಲಿನ ಬಳಿಕ ಮೂರು ಅಂಕ ಕುಸಿತ ಕಂಡು ಆರನೇ ಸ್ಥಾನದಲ್ಲಿದೆ.