ದೀರ್ಘಕಾಲದಿಂದಲೂ ಗಾಯದಿಂದ ಹೊರಗುಳಿಯುತ್ತಿರುವುದರ ಜೊತೆಗೆ ಅಸ್ಥಿರ ಪ್ರದರ್ಶನದಿಂದಾಗಿ ಸ್ಟೇನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಜೋಹಾನ್ಸ್'ಬರ್ಗ್(ಏ.19): ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ದಕ್ಷಿಣ ಆಫ್ರಿಕಾ ಏಕದಿನ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ವೇಗದ ಬೌಲರ್ ಡೇಲ್ ಸ್ಟೇನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಗ್ಲೆಂಡ್'ನಲ್ಲಿ ಜೂನ್ 1ರಿಂದ ಜರುಗಲಿರುವ ಮಿನಿ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು 15 ಮಂದಿ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ಎಬಿ.ಡಿವಿಲಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ದೀರ್ಘಕಾಲದಿಂದಲೂ ಗಾಯದಿಂದ ಹೊರಗುಳಿಯುತ್ತಿರುವುದರ ಜೊತೆಗೆ ಅಸ್ಥಿರ ಪ್ರದರ್ಶನದಿಂದಾಗಿ ಸ್ಟೇನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ಬಹುತೇಕ ಕ್ರಿಕೆಟ್ ಪರಿಣಿತರು ದಕ್ಷಿಣ ಆಫ್ರಿಕಾ ವೇಗಿಯ ಏಕದಿನ ಕ್ರಿಕೆಟ್ ಬದುಕು ಸಂಧ್ಯಾಕಾಲ ತಲುಪಿದೆ ಎಂದು ವಿಶ್ಲೇಷಿಸುತ್ತಿದ್ದಾರೆ.

ಡೇಲ್ ಸ್ಟೇನ್ 116 ಏಕದಿನ ಪಂದ್ಯಗಳನ್ನಾಡಿದ್ದು 180 ವಿಕೆಟ್ ಕಬಳಿಸಿದ್ದಾರೆ.