ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿಗೆ ತತ್ತರಿಸಿದ ಹರಿಣಗಳ ಪಡೆ ಕೇವಲ 204 ರನ್'ಗಳಿಗೆ ಸರ್ವಪತನ ಕಂಡಿದೆ. ಠಾಕೂರ್ 4 ವಿಕೆಟ್ ಪಡೆದರೆ, ಬುಮ್ರಾ ಹಾಗೂ ಚಾಹಲ್ ಮತ್ತು ಪಾಂಡ್ಯ-ಕುಲ್ದೀಪ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಸೆಂಚೂರಿಯನ್(ಫೆ.16): ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿಗೆ ತತ್ತರಿಸಿದ ಹರಿಣಗಳ ಪಡೆ ಕೇವಲ 204 ರನ್'ಗಳಿಗೆ ಸರ್ವಪತನ ಕಂಡಿದೆ. ಠಾಕೂರ್ 4 ವಿಕೆಟ್ ಪಡೆದರೆ, ಬುಮ್ರಾ ಹಾಗೂ ಚಾಹಲ್ ಮತ್ತು ಪಾಂಡ್ಯ-ಕುಲ್ದೀಪ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಆಫ್ರಿಕಾ ತಂಡಕ್ಕೆ ಮುಂಬೈ ವೇಗಿ ಠಾಕೂರ್ ಆರಂಭದಲ್ಲೇ ಆಘಾತ ನೀಡಿದರು. ಆಮ್ಲಾ 10 ರನ್'ಗಳಿಸಿದ್ದಾಗ ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಕೆಲಹೊತ್ತಿನಲ್ಲೇ ಮಾರ್ಕ್'ರಮ್ ಕೂಡ ಠಾಕೂರ್ ಎರಡನೇ ಬಲಿಯಾದರು. ಎಬಿಡಿ ಆಟ ಕೇವಲ 30 ರನ್'ಗಳಿಗೆ ಸೀಮಿತವಾಯಿತು. ಆರ್'ಸಿಬಿ ಸಹಪಾಠಿ ಚಾಹಲ್ ಎಬಿಡಿಯನ್ನು ಪೆವಿಲಿಯನ್'ಗೆ ಅಟ್ಟಿದರು. ಆ ಬಳಿಕ ಜೊಂಡೊ ಹಾಗೂ ಕ್ಲೇಸನ್ ತಂಡಕ್ಕೆ ಅಲ್ಪ ಚೇತರಿಕೆ ನೀಡಲು ಪ್ರಯತ್ನಿಸಲು ಪ್ರಯತ್ನಿಸಿದರು. ಆದರೆ ಬುಮ್ರಾ ಬೌಲಿಂಗ್'ನಲ್ಲಿ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್'ಗೆ ಕ್ಲೇಸನ್ ನಿರ್ಗಮಿಸಬೇಕಾಯಿತು. ಇದರ ಬೆನ್ನಲ್ಲೇ ಬೆಹ್ರಾದ್ದೀನ್ ಹಾಗೂ ಮೋರಿಸ್ ಸಹಾ ಬೇಗನೆ ಪೆವಿಲಿಯನ್ ಸೇರಿದರು. ಅರ್ಧಶತಕ ಬಾರಿಸಿ ಜೊಂಡೊ(54)ರನ್ನು ಚಾಹಲ್ ಬಲಿ ಪಡೆದರು. ಅಂತಿಮವಾಗಿ 204 ರನ್'ಗಳಿಗೆ ಕಟ್ಟಿಹಾಕುವಲ್ಲಿ ಕೊಹ್ಲಿ ಪಡೆ ಯಶಸ್ವಿಯಾಯಿತು.

ಈ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿದರೆ, 5-1 ರ ಅಂತರದಲ್ಲಿ ಸರಣಿ ಜಯಿಸಿದಂತಾಗುತ್ತದೆ.

* ಆಮ್ಲಾ ಕ್ಯಾಚ್ ಹಿಡಿಯುವುದರೊಂದಿಗೆ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ 600 ಕ್ಯಾಚ್ ಹಿಡಿದ ವಿಶ್ವದ ಮೂರನೇ ವಿಕೆಟ್ ಕೀಪರ್ ಎನ್ನುವ ಶ್ರೇಯಕ್ಕೆ ಪಾತ್ರರಾದರು. ಈ ಮೊದಲು ಮಾರ್ಕ್ ಬೌಷರ್ ಹಾಗೂ ಆಡಂ ಗಿಲ್'ಕ್ರಿಸ್ಟ್ ಈ ಸಾಧನೆ ಮಾಡಿದ್ದರು.

ಸಂಕ್ಷಿಪ್ತ ಸ್ಕೋರ್:

ದ. ಆಫ್ರಿಕಾ: 204/10

ಜೊಂಡೊ: 54

ಠಾಕೂರ್: 52/4

(* ವಿವರ ಅಪೂರ್ಣ)