2002ರ ನಾಟ್'ವೆಸ್ಟ್ ಸರಣಿಯ ಫೈನಲ್ ಪಂದ್ಯ ಮಾತ್ರ ಗಂಗೂಲಿ ಅಭಿಮಾನಿಗಳು ಎಂದೆಂದೂ ಮರೆಯಲು ಸಾಧ್ಯವಿಲ್ಲ...
ಸೌರವ್ ಗಂಗೂಲಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಕೆಚ್ಚೆದೆಯ ನಾಯಕರಲ್ಲೊಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಮ್ಯಾಚ್ ಫಿಕ್ಸಿಂಗ್ ಭೂತದ ನಂತರ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಸೌರವ್ ಗಂಗೂಲಿ, ಯುವಪ್ರತಿಭೆಗಳಾದ ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಪಾರ್ಥೀವ್ ಪಟೇಲ್ ಅವರಂತ ಆಟಗಾರರಿಗೆ ವೇದಿಕೆ ಒದಗಿಸಿಕೊಡುವ ಮೂಲಕ ಟೀಂ ಇಂಡಿಯಾವನ್ನು ಮೇಲೆತ್ತಿದರು.
ಟೀಂ ಇಂಡಿಯಾ ತವರಿನಲ್ಲಿ ಮಾತ್ರ ಹುಲಿ ಎಂಬಂತಿದ್ದ ಸನ್ನಿವೇಶವು, ದಾದಾ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ ವಿದೇಶದಲ್ಲೂ ಗೆಲುವಿನ ಸಿಹಿ ಸವಿಯತೊಡಗಿತು. ಸೌರವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅನೇಕ ಸಾಧನೆ ಮಾಡಿದರೂ, 2002ರ ನಾಟ್'ವೆಸ್ಟ್ ಸರಣಿಯ ಫೈನಲ್ ಪಂದ್ಯ ಮಾತ್ರ ಗಂಗೂಲಿ ಅಭಿಮಾನಿಗಳು ಎಂದೆಂದೂ ಮರೆಯಲು ಸಾಧ್ಯವಿಲ್ಲ...
ಅಷ್ಟಕ್ಕೂ ಆ ಪಂದ್ಯ ಹೇಗಿತ್ತು..? ನೋಡಿಲ್ಲ ಅಂದ್ರೆ ಇಲ್ಲಿ ನೋಡಿ.. ಇದು ದಾದಾ ಹುಟ್ಟುಹಬ್ಬದ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾದ ಸ್ಫೂರ್ತಿಯ ಕ್ಷಣವೆಂದರೆ ಇದು ಅತಿಶಯೋಕ್ತಿಯಾಗಲಾರದು...

