ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2003ರ ಏಕದಿನ ವಿಶ್ವಕಪ್'ನಲ್ಲಿ ಫೈನಲ್ ಪ್ರವೇಶಿಸಿತ್ತು. ಇದಕ್ಕೂ 2002 ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಲಂಕಾ ಜತೆ ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಲ್ಲದೇ ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ವೆಸ್ಟ್'ಇಂಡಿಸ್ ನೆಲದಲ್ಲೂ ಭಾರತ ಗೆಲುವಿನ ನಗೆ ಬೀರಿತ್ತು.

ಕೋಲ್ಕತಾ(ನ.02): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕ್ರೀಡೆಯಲ್ಲಿನ ‘ಮೈಂಡ್ ಗೇಮ್’ ಕುರಿತು ಪುಸ್ತಕವೊಂದನ್ನು ಬರೆಯುತ್ತಿದ್ದಾರಂತೆ.

ಈ ಕುರಿತು ಪ್ರತಿಕ್ರಿಯಿಸಿರುವ ಗಂಗೂಲಿ, ‘ಬಹಳ ಕಾಲದಿಂದ ಪುಸ್ತಕ ಬರೆಯಲು ಯತ್ನಿಸುತ್ತಿದ್ದೆ ಸಾಧ್ಯವಾಗಿರಲಿಲ್ಲ. ನಾನೇನು ಶ್ರೇಷ್ಠ ಬರಹಗಾರನಲ್ಲ. ಆಟದಲ್ಲಿ ಪ್ರಗತಿ ಸಾಧಿಸಲು ಆಟಗಾರರ ಮನಸ್ಥಿತಿ ಬಹಳ ಪ್ರಮುಖವಾದುದು. ಈ ಅಂಶಗಳನ್ನು ಪುಸ್ತಕ ಒಳಗೊಂಡಿದ್ದು, ಮೈಂಡ್‌'ಗೇಮ್‌'ಗಳು ಆಟದ ಭಾಗವಾಗಿ ಹೋಗಿರುವುದು ಬೇಸರದ ಸಂಗತಿ’ ಎಂದು ತಿಳಿಸಿದರು.

‘ಇನ್ನು ಆತ್ಮಚರಿತ್ರೆ ರಚನೆ ಕುರಿತು ನಾನು ಇನ್ನೂ ಯೋಚನೆ ಮಾಡಿಲ್ಲ’ ಎಂದು ಇದೇ ವೇಳೆ ಗಂಗೂಲಿ ಹೇಳಿದರು.