2003ರ ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕಿತ್ತು

First Published 2, Mar 2018, 9:42 AM IST
Sourav Ganguly Rues Not Having MS Dhoni in his 2003 World Cup Squad
Highlights

2003ರ ಏಕದಿನ ವಿಶ್ವಕಪ್'ನಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 125 ರನ್'ಗಳ ಅಂತರದಲ್ಲಿ ಮುಗ್ಗರಿಸಿತ್ತು.

ಕೋಲ್ಕತಾ(ಮಾ.02): 2003ರ ಏಕದಿನ ವಿಶ್ವಕಪ್ ತಂಡದಲ್ಲಿ ಧೋನಿ ಇರಬೇಕಿತ್ತು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಮ್ಮ ಮನದಾಳದ ಇಚ್ಛೆ ಬಹಿರಂಗಗೊಳಿಸಿದ್ದಾರೆ.

ತಮ್ಮ ಆತ್ಮಚರಿತ್ರೆ ‘ಎ ಸೆಂಚುರಿ ಈಸ್ ನಾಟ್ ಎನಫ್’ನಲ್ಲಿ ಧೋನಿ ಕುರಿತು ಮಾತನಾಡಿರುವ ದಾದಾ, ‘2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದ್ದಾಗ ಧೋನಿ ಇನ್ನು ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿದ್ದರು. ಆ ತಂಡದಲ್ಲಿ ಧೋನಿ ಇರಬೇಕಿತ್ತು’ ಎಂದಿದ್ದಾರೆ.

ಧೋನಿ, 2004ರ ಡಿಸೆಂಬರ್‌'ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌'ಗೆ ಪದಾರ್ಪಣೆ ಮಾಡಿದ್ದರು. ‘ನಾನು ಗುರುತಿಸಿದ ಪ್ರತಿಭೆ ಇಂದು ದಿಗ್ಗಜನಾಗಿ ಬೆಳೆದಿರುವುದು ನನಗೆ ಬಹಳ ಹೆಮ್ಮೆಯ ವಿಷಯ’ ಎಂದು ಗಂಗೂಲಿ ಹೇಳಿದ್ದಾರೆ.

2003ರ ಏಕದಿನ ವಿಶ್ವಕಪ್'ನಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 125 ರನ್'ಗಳ ಅಂತರದಲ್ಲಿ ಮುಗ್ಗರಿಸಿತ್ತು.

 

loader