ಗಂಗೂಲಿಯ ಈ ಬಾರಿಯ ಐಪಿಎಲ್ ಪ್ಯಾಂಟಿಸಿ ತಂಡ ಇಂತಿದೆ:
ಬೆಂಗಳೂರು(ಏ.26): ಟೀಂ ಇಂಡಿಯಾದ ಯಶಸ್ವಿ ನಾಯಕ ಸೌರವ್ ಗಂಗೂಲಿ 10ನೇ ಆವೃತ್ತಿಯ ಐಪಿಎಲ್ ಪ್ಯಾಂಟಸಿ ತಂಡವನ್ನು ಪ್ರಕಟಿಸಲಾಗಿದ್ದು ಆರ್'ಸಿಬಿ ತಂಡದಿಂದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಆದರೆ ದಾದ ಅವರ ಕನಸಿನ ತಂಡದಲ್ಲಿ ಇತ್ತೀಚೆಗಷ್ಟೇ ಟಿ20 ಕ್ರಿಕೆಟ್'ನಲ್ಲಿ 10 ಸಾವಿರ ರನ್ ಬಾರಿಸಿದ ಸ್ಫೋಟಕ ಬ್ಯಾಟ್ಸ್'ಮನ್ ಕ್ರಿಸ್ ಗೇಲ್, ಆಸೀಸ್ ಆರಂಭಿಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ, ಗ್ರೇಟ್ ಫಿನಿಷರ್ ಎಂದೇ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಹಾಗೆಯೇ ಅನುಭವಿ ಆಲ್ರೌಂಡರ್ ಯುಜರಾಜ್ ಸಿಂಗ್ ಹಾಗೂ ಯುವವೇಗಿ ಜಸ್ಪ್ರೀತ್ ಬುಮ್ರಾಗೂ ಕೂಡಾ ಗಂಗೂಲಿ ಕನಸಿನ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ..
ಹಾಗಾದರೆ ಗಂಗೂಲಿಯ ಈ ಬಾರಿಯ ಐಪಿಎಲ್ ಪ್ಯಾಂಟಿಸಿ ತಂಡ ಇಂತಿದೆ:
ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸ್ಟೀವ್ ಸ್ಮಿತ್, ಎಬಿ.ಡಿವಿಲಿಯರ್ಸ್, ನಿತೀಶ್ ರಾಣಾ, ಮನೀಶ್ ಪಾಂಡೆ, ರಿಷಭ್ ಪಂತ್, ಸುನಿಲ್ ನರೈನ್, ಭುವನೇಶ್ವರ್ ಕುಮಾರ್, ಕ್ರಿಸ್ ಮೋರಿಸ್.
