ವಿಶ್ವಕಪ್ ಕಾಮೆಂಟ್ರಿ: ಕನ್ನಡಿಗನಿಗಿಲ್ಲ ಸ್ಥಾನ..!
ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ 24 ತಾರಾ ವೀಕ್ಷಕ ವಿವರಣೆಗಾರರನ್ನು ಐಸಿಸಿ ಆಯ್ಕೆ ಮಾಡಿದ್ದು ಗಂಗೂಲಿ ಸೇರಿದಂತೆ ಭಾರತದ ಮೂವರು ಸ್ಥಾನ ಪಡೆದಿದ್ದಾರೆ.
ದುಬೈ(ಮೇ.17): ಮುಂಬರುವ ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟೂರ್ನಿಗೆ 24 ತಾರಾ ವೀಕ್ಷಕ ವಿವರಣೆಗಾರರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಆಯ್ಕೆ ಮಾಡಿದ್ದು, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಹಾಗೂ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೆಕರ್ ಸ್ಥಾನ ಪಡೆದಿದ್ದಾರೆ. ಆದರೆ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಅವಕಾಶ ಸಿಕ್ಕಿಲ್ಲ.
ಮೇ.30ರಿಂದ ಇಂಗ್ಲೆಂಡ್'ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಟಿವಿ ವೀಕ್ಷಕ ವಿವರಣೆಗಾರರಾಗಿ ಶ್ರೀಲಂಕಾದ ಕುಮಾರ ಸಂಗಕ್ಕರ, ಪಾಕಿಸ್ತಾನ ವಾಸೀಂ ಅಕ್ರಂ, ರಮೀಜ್ ರಾಜಾ, ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಅತರ್ ಅಲಿ ಖಾನ್ ತಾರಾ ವೀಕ್ಷಕ ವಿವರಣೆಗಾರರಾಗಿ ಆಯ್ಕೆಯಾಗಿದ್ದಾರೆ.
ಇದಷ್ಟೇ ಅಲ್ಲದೇ ಇಶಾ ಗುಹಾ, ಮೆಲಾನೀ ಜೋನ್ಸ್, ಮತ್ತು ಅಲಿಸನ್ ಮಿಚೆಲ್ಸ್ ಈ ಮೂವರು ಮಹಿಳೆಯರು ವೀಕ್ಷಕ ವಿವರಣೆ ನೀಡಲಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಪರ ಕಾಮೆಂಟ್ರಿ ಮಾಡಿ ಟ್ವಿಟರಿಗರಿಂದ ಟ್ರೋಲ್ ಆಗಿದ್ದ ಮಾಂಜ್ರೆಕರ್ ತಮ್ಮ ವಾಕ್ ಚಾತುರ್ಯಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ.
ವಿಶ್ವಕಪ್ ಟೂರ್ನಿಯ ಸಂಪೂರ್ಣ ವೀಕ್ಷಕ ವಿವರಣೆಗಾರರ ಪಟ್ಟಿ ಇಲ್ಲಿದೆ ನೋಡಿ...
ನಾಸೀರ್ ಹುಸೇನ್, ಮೈಕಲ್ ಕ್ಲಾರ್ಕ್, ಇಯಾನ್ ಬಿಷಪ್, ಸೌರವ್ ಗಂಗೂಲಿ, ಮೆಲೆನೀ ಜೋನ್ಸ್, ಕುಮಾರ ಸಂಗಕ್ಕರ, ಮೈಕೆಲ್ ಆರ್ಥನ್, ಅಲಿಸನ್ ಮೈಕೆಲ್, ಬ್ರೆಂಡನ್ ಮೆಕ್ಲಮ್, ಗ್ರೇಮ್ ಸ್ಮಿತ್, ವಾಸೀಂ ಅಕ್ರಂ, ಶಾನ್ ಪೊಲ್ಲಾಕ್, ಮೈಕಲ್ ಸ್ಲೇಟರ್, ಮಾರ್ಕ್ ನಿಕೋಲಸ್, ಮಿಚೆಲ್ ಹೋಲ್ಡಿಂಗ್ಸ್, ಇಶಾ ಗುಹಾ, ಪೊಮ್ಮಿ ಮುಗ್ವಾ, ಸಂಜಯ್ ಮಾಂಜ್ರೆಕರ್, ಹರ್ಷಾ ಬೋಗ್ಲೆ, ಸಿಮೋನ್ ಡಲ್, ಇಯಾನ್ ಸ್ಮಿತ್, ರಮೀಜ್ ರಾಜಾ, ಅತರ್ ಅಲಿ ಖಾನ್ ಮತ್ತು ಇಯಾನ್ ವಾರ್ಡ್.
12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.