ಇಂಗ್ಲೆಂಡ್  ವಿರುದ್ಧ ಗೆಲುವಿನ ನೆಗೆ ಬೀರಲು  ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡಕ್ಕೆ ತಮ್ಮ ಸಲಹೆ ಯನ್ನ ಯಾವುದೇ ಕಾರಣಕ್ಕೂ ಲಘುವಾಗಿ ಪರಿಣಗಣಿಸಬೇಡಿ ಎಂದಿದ್ದಾರೆ. ಅಷ್ಟಕ್ಕೂ ದಾದಾ ನೀಡಿರುವ ಸಲಹೆ ಏನು? ಇಲ್ಲಿದೆ.

ಬರ್ಮಿಂಗ್‌ಹ್ಯಾಮ್(ಆ.05): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾಗೆ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಂ ಬ್ಯಾಟ್ಸ್‌ಮನ್‌ಗಳಿಗೆ ದಾದ ಟಿಪ್ಸ್ ನೀಡಿದ್ದಾರೆ.

ಮೊದಲ ಪಂದ್ಯದ ಸೋಲಿನಿಂದ ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದು ನಾಯಕ ವಿರಾಟ್ ಕೊಹ್ಲಿಗೆ, ಗಂಗೂಲಿ ಸಲಹೆ ನೀಡಿದ್ದಾರೆ. ಇದೇ ತಂಡಕ್ಕೆ ಕಮ್‌ಬ್ಯಾಕ್ ಮಾಡೋ ಎಲ್ಲಾ ಸಾಮರ್ಥ್ಯವಿದೆ. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಬಾರದು ಎಂದಿದ್ದಾರೆ ಗಂಗೂಲಿ.

ನಾಯಕ ವಿರಾಟ್ ಕೊಹ್ಲಿ ಜೊತೆಗೆ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಗಂಗೂಲಿ ಸಲಹೆ ನೀಡಿದ್ದಾರೆ. ಮುರಳಿ ವಿಜಯ್ ಅಜಿಂಕ್ಯ ರಹಾನೆ ಸೇರಿದಂತೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕು. ಜೊತೆ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕು ಎಂದು ಗಂಗೂಲಿ ಸೂಚಿಸಿದ್ದಾರೆ.