ಆತ್ಮಹತ್ಯೆ ಮಾಡಿಕೊಂಡ ಪಾಕ್ ಕ್ರಿಕೆಟಿಗ..!

Son Of Former Pakistani Cricketer Commits Suicide
Highlights

ಮೊದಲ ವರ್ಷ ಪದವಿ ವಿದ್ಯಾರ್ಥಿಯಾಗಿದ್ದ ಮೊಹಮದ್, ಕರಾಚಿ ಅಂಡರ್ 19 ತಂಡದ ಪರ ಆಡುತ್ತಿದ್ದ. ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ಮೊಹಮದ್, ಗುಣಮುಖರಾದ ಬಳಿಕ ತಂಡಕ್ಕೆ ಮರು ಆಯ್ಕೆ ಬಯಸಿದಾಗ ಆತನನ್ನು ಆಯ್ಕೆ ಮಾಡಲಿಲ್ಲ. ಇದರಿಂದ ಮನನೊಂದ ಮೊಹಮದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಂದೆ ಹನೀಫ್ ಆರೋಪಿಸಿದ್ದಾರೆ.

ಇಸ್ಲಾಮಾಬಾದ್(ಫೆ.21): ಅಂಡರ್-19 ತಂಡಕ್ಕೆ ಆಯ್ಕೆಯಾಗದ ಕಾರಣ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಮೀರ್ ಹನೀಫ್'ರ ಪುತ್ರ ಮೊಹಮದ್ ಜರ್ಯಾಬ್ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಮೊದಲ ವರ್ಷ ಪದವಿ ವಿದ್ಯಾರ್ಥಿಯಾಗಿದ್ದ ಮೊಹಮದ್, ಕರಾಚಿ ಅಂಡರ್ 19 ತಂಡದ ಪರ ಆಡುತ್ತಿದ್ದ. ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ಮೊಹಮದ್, ಗುಣಮುಖರಾದ ಬಳಿಕ ತಂಡಕ್ಕೆ ಮರು ಆಯ್ಕೆ ಬಯಸಿದಾಗ ಆತನನ್ನು ಆಯ್ಕೆ ಮಾಡಲಿಲ್ಲ. ಇದರಿಂದ ಮನನೊಂದ ಮೊಹಮದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಂದೆ ಹನೀಫ್ ಆರೋಪಿಸಿದ್ದಾರೆ.

ಅಮೀರ್ ಹನೀಫ್ 90ರ ದಶಕದಲ್ಲಿ ಪಾಕ್ ಪರ 5 ಏಕದಿನ ಪಂದ್ಯಗಳನ್ನಾಡಿದ್ದರು.

loader