ಮಹಿಳಾ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಸ್ಮೃತಿ ಮಂಧನಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿಯಾಗಿದೆ. ಶತಕ ಹಾಗೂ ಅರ್ಧಶತಕದ ಮೂಲಕ ಅಬ್ಬರಿಸುತ್ತಿರುವ ಸ್ಮೃತಿ, ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಸ್ಕಾರ್ಬರೋ(ಆ.07): ಇಂಗ್ಲೆಂಡ್‌ನ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಭಾರತದ ಸ್ಮತಿ ಮಂಧನಾ ಅಬ್ಬರ ಮುಂದುವರಿದಿದೆ. ಇತ್ತೀಚೆಗೆ ಅತೀ ವೇಗದ ಶತಕ ಸಿಡಿಸಿ ದಾಖಲೆ ಬರೆದ ಸ್ಮೃತಿ ಮಂಧನಾ ಇದೀಗ ಮತ್ತೊಂದು ಅರ್ಧಶತಕ ಸಿಡಿಸಿದ್ದಾರೆ.

ವೆಸ್ಟರ್ನ್ ಸ್ಟಾರ್ಮ್ ತಂಡದ ಪರ ಆಡುತ್ತಿರುವ ಸ್ಮತಿ ಭಾನುವಾರ ನಡೆದ ಯಾರ್ಕ್‌ಶೈರ್ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಲ್ಲಿ 56 ರನ್ ಸಿಡಿಸಿದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಮತಿ ಇನ್ನಿಂಗ್ಸ್ ನಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳಿದ್ದವು.

ಮಂಧನಾ ಆಟದ ನೆರವಿನಿಂದ ವೆಸ್ಟರ್ನ್ ಸ್ಟಾರ್ಮ್ 7 ವಿಕೆಟ್ ಜಯ ಸಾಧಿಸಿತು. ಲೀಗ್‌ನಲ್ಲಿ 6 ಪಂದ್ಯಗಳಿಂದ ಸ್ಮತಿ 2 ಅರ್ಧಶತಕ, 1 ಶತಕದೊಂದಿಗೆ 338 ರನ್ ಕಲೆಹಾಕಿದ್ದಾರೆ.

Scroll to load tweet…