ಬಾರ್'ನಲ್ಲಿ ಸ್ಟೀವ್ ಸ್ಮಿತ್ ಪ್ರತ್ಯಕ್ಷ..!
ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ 1 ವರ್ಷ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಅಮೆರಿಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ನ್ಯೂಯಾರ್ಕ್'ನ ಚೀನಾ ಟೌನ್'ನ ಬಾರ್'ವೊಂದರಲ್ಲಿ ಕಾಣಿಸಿಕೊಂಡಿದ್ದು, ಬ್ರಿಟನ್'ನ ಕೆಲ ಮಾಧ್ಯಮಗಳು ಫೋಟೋ ಸಹಿತ ಸುದ್ದಿ ಪ್ರಕಟಿಸಿವೆ.
ನ್ಯೂಯಾರ್ಕ್: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ 1 ವರ್ಷ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಅಮೆರಿಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ನ್ಯೂಯಾರ್ಕ್'ನ ಚೀನಾ ಟೌನ್'ನ ಬಾರ್'ವೊಂದರಲ್ಲಿ ಕಾಣಿಸಿಕೊಂಡಿದ್ದು, ಬ್ರಿಟನ್'ನ ಕೆಲ ಮಾಧ್ಯಮಗಳು ಫೋಟೋ ಸಹಿತ ಸುದ್ದಿ ಪ್ರಕಟಿಸಿವೆ.
ಸ್ನೇಹಿತರೊಂದಿಗೆ ಸಾಕಷ್ಟು ತಮಾಶೆಯಾಗಿ ಜೋಕ್ ಮಾಡುತ್ತಿದ್ದರು, ಹಾಗೆಯೇ ನೋಡುವುದಕ್ಕೆ ಸಂತೋಷವಾಗಿದ್ದಂತೆ ಕಾಣುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಇದೇ ವೇಳೆ ಸ್ಮಿತ್ ತಮ್ಮ ಪ್ರೇಯಸಿ ಡಾನಿ ವಿಲ್ಲೀಸ್ ಜತೆ ಈ ವರ್ಷ ದಾಂಪತ್ಯಕ್ಕೆ ಕಾಲಿರಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಸ್ಮಿತ್ ತಂದೆ ಪೀಟರ್ ತಿಳಿಸಿದ್ದಾರೆ.