ಸ್ಮಿತ್-ವಾರ್ನರ್'ಗೆ ಇನ್ನೊಂದು ವರ್ಷ ವನವಾಸ; ಆಸೀಸ್ ಮಂಡಳಿಯಿಂದ ಸ್ಮಿತ್-ವಾರ್ನರ್'ಗೆ ಬಿಗ್ ಶಾಕ್..!

Smith Warner banned for 12 months by Cricket Australia
Highlights

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್'ಟೌನ್'ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ(ಬಾಲ್ ಟ್ಯಾಂಪರಿಂಗ್) ಮಾಡಿ ಸಿಕ್ಕಿಬಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಈ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ ವಿಚಾರಣೆ ನಡೆಸಿ ಈ ಶಿಕ್ಷೆ ಪ್ರಕಟಿಸಿದೆ.

ಬೆಂಗಳೂರು(ಮಾ.28): ಚೆಂಡು ವಿರೂಪ ಮಾಡಿದ ತಪ್ಪಿಗಾಗಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್'ಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧ ಹೇರಿದೆ, ಜತೆಗೆ ಸಹ ಆಟಗಾರ ಕ್ಯಾಮರೋನ್ ಬೆನ್'ಕ್ರಾಪ್ಟ್'ಗೆ 9 ತಿಂಗಳು ಕಾಲ ನಿಷೇಧ ಹೇರಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್'ಟೌನ್'ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ(ಬಾಲ್ ಟ್ಯಾಂಪರಿಂಗ್) ಮಾಡಿ ಸಿಕ್ಕಿಬಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಈ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ ವಿಚಾರಣೆ ನಡೆಸಿ ಈ ಶಿಕ್ಷೆ ಪ್ರಕಟಿಸಿದೆ.

ಇನ್ನು ಈ ಮೂರು ಆಟಗಾರರು ಆಸೀಸ್ ಕ್ರಿಕೆಟ್ ಮಂಡಳಿಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಇದೇ ವೇಳೆ ಐಪಿಎಲ್'ನಲ್ಲಿ ಈ ಆಟಗಾರರು ಪಾಲ್ಗೊಳ್ಳುವ ಕುರಿತಂತೆ ಇನ್ನಷ್ಟೇ ನಿರ್ಧಾರ ಹೊರಬೀಳಬೇಕಿದೆ.

loader