51 ಟೆಸ್ಟ್ ಪಂದ್ಯಗಳ 94ಇನಿಂಗ್ಸ್‌ಗಳಲ್ಲಿ 60.34ರ ಬ್ಯಾಟಿಂಗ್ ಸರಾಸರಿಯಲ್ಲಿ 4,888 ರನ್ ಕಲೆಹಾಕಿರುವ ಸ್ಮಿತ್ ಪುಣೆ ಟೆಸ್ಟ್‌ನಲ್ಲಿನ ಶತಕದೊಂದಿಗೆ ದಾಖಲೆಯ ಸಮೀಪ ಬಂದು ನಿಂತಿದ್ದಾರೆ.

ಬೆಂಗಳೂರು(ಮಾ.03): ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಟೆಸ್ಟ್ ತಂಡದಲ್ಲಿ 5 ಸಾವಿರ ರನ್ ಪೂರೈಸಲು ಇನ್ನು 112ರನ್‌'ಗಳ ಅಗತ್ಯವಿದೆ.

51 ಟೆಸ್ಟ್ ಪಂದ್ಯಗಳ 94ಇನಿಂಗ್ಸ್‌ಗಳಲ್ಲಿ 60.34ರ ಬ್ಯಾಟಿಂಗ್ ಸರಾಸರಿಯಲ್ಲಿ 4,888 ರನ್ ಕಲೆಹಾಕಿರುವ ಸ್ಮಿತ್ ಪುಣೆ ಟೆಸ್ಟ್‌ನಲ್ಲಿನ ಶತಕದೊಂದಿಗೆ ದಾಖಲೆಯ ಸಮೀಪ ಬಂದು ನಿಂತಿದ್ದಾರೆ.

ಬೆಂಗಳೂರು ಟೆಸ್ಟ್‌'ನ ಮೊದಲ ಇನಿಂಗ್ಸ್‌ನಲ್ಲಿಯೇ ಸ್ಮಿತ್ ಈ ಸಾಧನೆ ಮಾಡಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತ್ವರಿತಗತಿಯಲ್ಲಿ 5 ಸಹಸ್ರ ರನ್ ಕಲೆಹಾಕಿದ ಮಾಜಿ ಕ್ರಿಕೆಟಿಗರಾದ ಗ್ಯಾರಿ ಸೋಬರ್ಸ್, ಸುನೀಲ್ ಗವಾಸ್ಕರ್, ವಿವ್ ರಿಚರ್ಡ್ಸ್ ಮತ್ತು ಮ್ಯಾಥ್ಯೂ ಹೇಡನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

"ಮೊದಲ ಟೆಸ್ಟ್‌ನಲ್ಲಿ ಆಡಿದ 11ರ ಬಳಗವನ್ನೆ 2ನೇ ಪಂದ್ಯದಲ್ಲಿಯೂ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಪಿಚ್ ಯಾವ ರೀತಿ ಸ್ಪಂದಿಸಿದರೂ ಅದಕ್ಕೆ ತಕ್ಕಂತೆ ಆಟವಾಡುವ ಸಾಮರ್ಥ್ಯ ತಂಡದಲ್ಲಿದೆ. ಭಾರತ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಉತ್ಸಾಹವಿದೆ".

- ಸ್ಟೀವನ್ ಸ್ಮಿತ್, ಆಸ್ಟ್ರೇಲಿಯಾ ತಂಡದ ನಾಯಕ