ಗಾಯದ ಸಮಸ್ಯೆಯಿಂದ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿದ್ದು, ಅವರ ಬದಲಿಗೆ ಇಶಾಂತ್ ಶರ್ಮಾಗೆ ಸ್ಥಾನ ಕಲ್ಪಿಸಲಾಗಿದೆ. ರೋಹಿತ್ ಶರ್ಮಾ ಹಾಗೂ ಮುರುಳಿ ವಿಜಯ್ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನಾಗ್ಪುರ(ನ.24): ಭಾರತ-ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್'ನಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತ ಪ್ರಮುಖ 3 ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.
ಗಾಯದ ಸಮಸ್ಯೆಯಿಂದ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿದ್ದು, ಅವರ ಬದಲಿಗೆ ಇಶಾಂತ್ ಶರ್ಮಾಗೆ ಸ್ಥಾನ ಕಲ್ಪಿಸಲಾಗಿದೆ. ರೋಹಿತ್ ಶರ್ಮಾ ಹಾಗೂ ಮುರುಳಿ ವಿಜಯ್ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ತಂಡವು ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿದಿದೆ.
ತಂಡಗಳು ಹೀಗಿವೆ:
ಭಾರತ: ವಿಜಯ್, ರಾಹುಲ್, ಪೂಜಾರ, ಕೊಹ್ಲಿ, ರಹಾನೆ, ರೋಹಿತ್ ಶರ್ಮಾ, ಸಾಹಾ, ಅಶ್ವಿನ್, ಜಡೇಜಾ, ಉಮೇಶ್ ಯಾದವ್, ಇಶಾಂತ್ ಶರ್ಮಾ.
ಶ್ರೀಲಂಕಾ: ಸಮರವಿಕ್ರಮ, ಕರುಣರತ್ನೆ, ತಿರುಮನ್ನೆ, ಮ್ಯಾಥ್ಯೂಸ್, ಚಾಂಡಿಮಲ್, ಡಿಕ್'ವೆಲ್ಲಾ, ಶನುಕಾ, ಪೆರೆರಾ, ಹೆರಾತ್, ಲಕ್ಮಲ್, ಗಮಾಗೆ.