Singapore Open 2022: ಚೊಚ್ಚಲ ಬಾರಿಗೆ ಸಿಂಧು ಮುಡಿಗೆ ಸಿಂಗಾಪುರ ಓಪನ್ ಪ್ರಶಸ್ತಿ ಗರಿ

ಪಿ.ವಿ. ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಂಟನ್‌ ಚಾಂಪಿಯನ್‌
ಚೊಚ್ಚಲ ಬಾರಿಗೆ ಸೂಪರ್ 500 ಟ್ರೋಫಿ ಜಯಿಸುವಲ್ಲಿ ಸಿಂಧು ಸಫಲ
ಈ ವರ್ಷದಲ್ಲಿ ಮೂರನೇ ಪ್ರಶಸ್ತಿ ಜಯಿಸಿದ ಬ್ಯಾಡ್ಮಿಂಟನ್ ತಾರೆ

Singapore Open PV Sindhu Wins First Super 500 Title Of 2022 kvn

ಸಿಂಗಾಪುರ(ಜು.17): ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಚೀನಾದ ವಾಂಗ್‌ ಝಿ ಯಿ ವಿರುದ್ದ 21-9, 11-21, 21-15 ಗೇಮ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಪಿ ವಿ ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ 2022ರಲ್ಲಿ ಮೊದಲ ಸೂಪರ್ 500 ಟ್ರೋಫಿ ಜಯಿಸುವಲ್ಲಿ ಸಿಂಧು ಯಶಸ್ವಿಯಾಗಿದ್ದಾರೆ. ಈ ವರ್ಷದಲ್ಲಿ ಸಯ್ಯದ್ ಮೋದಿ ಹಾಗೂ ಸ್ವಿಸ್ ಓಪನ್ ಪ್ರಶಸ್ತಿ ಜಯಿಸಿದ ಸಿಂಧುಗಿದು ಮೂರನೇ ಪ್ರಶಸ್ತಿಯಾಗಿದೆ.

ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧು, ಮೊದಲ ಗೇಮ್‌ನಲ್ಲೇ ಆಕ್ರಮಣಕಾರಿಯಾಟವಾಡುವ ಮೂಲಕ 21-9 ಅಂಕಗಳೊಂದಿಗೆ ಮೊದಲ ಗೇಮ್‌ ಸುಲಭವಾಗಿ ಕೈವಶ ಮಾಡಿಕೊಂಡರು. ಆದರೆ ಎರಡನೇ ಗೇಮ್‌ನಲ್ಲಿ  ಚೀನಾದ ವಾಂಗ್‌ ಝಿ ಯಿ 11-21 ಅಂಕಗಳೊಂದಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆದರೆ ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ತಮ್ಮೆಲ್ಲ ಅನುಭವವನ್ನು ಸಮರ್ಥವಾಗಿ ಬಳಸಿಕೊಂಡ ಸಿಂಧು 21-15 ಅಂಕಗಳೊಂದಿಗೆ ಗೆಲುವಿನ ನಗೆ ಬೀರಿದರು. 

World Athletics Championships: ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲಲು ಮುರುಳಿ ಶ್ರೀಶಂಕರ್ ಫೇಲ್‌..!

Singapore Open PV Sindhu Wins First Super 500 Title Of 2022 kvn

ಈ ಮೊದಲು ಶನಿವಾರ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ 3ನೇ ಶ್ರೇಯಾಂಕಿತ ಸಿಂಧು ಜಪಾನಿನ ಸೆನಾ ಕವಾಕಮಿ ವಿರುದ್ಧ 21-15, 21-7 ನೇರ ಗೇಮ್‌ಗಳಿಂದ ಸುಲಭ ಜಯ ಸಾಧಿಸಿದರು. ಇತ್ತೀಚೆಗೆ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ನಂ.11 ವಾಂಗ್‌ರನ್ನು ಸೋಲಿಸಿದ್ದ ಸಿಂಧು, ಮತ್ತೊಮ್ಮೆ ಅವರನ್ನು ಮಣಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗಾಪುರ ಓಪನ್‌ನಲ್ಲಿ ಈವರೆಗೆ ಭಾರತೀಯರ ಪೈಕಿ ಸೈನಾ ನೆಹ್ವಾಲ್‌(2010) ಹಾಗೂ ಸಾಯಿ ಪ್ರಣೀತ್‌(2017) ಮಾತ್ರ ಚಿನ್ನ ಗೆದ್ದಿದ್ದರು.

Latest Videos
Follow Us:
Download App:
  • android
  • ios