ಇದುವರೆಗೂ ಭಾರತದ ಈ ಇಬ್ಬರು ಆಟಗಾರರು ಐದು ಬಾರಿ ಮುಖಾಮುಖಿಯಾಗಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಶ್ರೀಕಾಂತ್ ಜಯಿಸಿದ್ದರೆ, ಇದೇ ಮೊದಲ ಬಾರಿಗೆ ಸಾಯಿ ಪ್ರಣಿತ್ ಗೆಲುವಿನ ನಗೆ ಬೀರಿದ್ದಾರೆ.

ಸಿಂಗಾಪುರ್(ಏ.16): ಭಾರತದ ಸ್ಟಾರ್ ಶಟ್ಲರ್'ಗಳಾದ ಕೆ.ಶ್ರೀಕಾಂತ್ ಮತ್ತು ಬಿ. ಸಾಯಿ ಪ್ರಣೀತ್ ನಡುವಿನ ಸಿಂಗಾಪುರ್ ಫೈನಲ್ ಪಂದ್ಯದಲ್ಲಿ ಯುವ ಪ್ರತಿಭೆ ಬಿ. ಸಾಯಿ ಪ್ರಣೀತ್ ಪ್ರಶಸ್ತಿ ಜಯಿಸುವಲ್ಲಿ ಸಫಲರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿಕೊಂಡಿದ್ದಕೆ. ಶ್ರೀಕಾಂತ್ ಮೊದಲ ಗೇಮ್ಸ್'ನ್ನು 21-17 ಅಂಕಗಳ ಅಂತರದಲ್ಲಿ ತಮ್ಮದಾಗಿಸಿಕೊಂಡರು. ಆದರೆ ಎರಡನೇ ಹಾಗೂ ಮೂರನೇ ಗೇಮ್ಸ್'ನಲ್ಲಿ (21-17, 21-12) ಬಲಿಷ್ಟ ತಿರುಗೇಟು ನೀಡಿದ ಸಾಯಿ ಪ್ರಣೀತ್ ಚೊಚ್ಚಲ ಸೂಪರ್ ಸೀರಿಸ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು.

ಇದುವರೆಗೂ ಭಾರತದ ಈ ಇಬ್ಬರು ಆಟಗಾರರು ಐದು ಬಾರಿ ಮುಖಾಮುಖಿಯಾಗಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಶ್ರೀಕಾಂತ್ ಜಯಿಸಿದ್ದರೆ, ಇದೇ ಮೊದಲ ಬಾರಿಗೆ ಸಾಯಿ ಪ್ರಣಿತ್ ಗೆಲುವಿನ ನಗೆ ಬೀರಿದ್ದಾರೆ.