ಹಾಲು ಮಾರುವವನ ಮಗನಿಗೆ ಬೆಳ್ಳಿ ಪದಕ

ಬಾಲ್ಯದಲ್ಲಿ ಶಾಲೆಗೆ ಚಕ್ಕರ್ ಹೊಡೆದು, ತಂದೆಯೊಂದಿಗೆ ಸೇರಿ ಬೆಳಗ್ಗೆ ಮತ್ತು ಸಂಜೆ ಹಾಲಿನ ವ್ಯಾಪಾರ ಮಾಡುತ್ತಿದ್ದ ಸಚಿನ್‌ಗೆ ಕುಸ್ತಿ ಕಲಿಯಬೇಕೆಂಬ ಆಸೆಯಾಯಿತು. ಸ್ವತಃ ಮಾಜಿ ಕುಸ್ತಿಪುಟುವಾಗಿದ್ದ ಹಂಸ್‌ರಾಜ್ ಪುತ್ರನ ಆಸೆಗೆ ಒಪ್ಪಿ, ಅದೇ ದಿನವೇ ಗ್ರಾಮದಲ್ಲಿದ್ದ ಗರಡಿ ಮನೆಗೆ ಸೇರಿಸಿದರು. ಅಲ್ಲಿಂದ ಇಲ್ಲಿ ವರೆಗೂ ಸಚಿನ್‌ಗೆ ಕುಸ್ತಿ ಯೊಂದನ್ನು ಬಿಟ್ಟರೆ ಮನೆಯ ಯಾವುದೇ ಕೆಲಸವನ್ನು ಹೇಳಲಿಲ್ಲ.

Silver lining for wrestler Sachin Giri From selling milk to shining on mat

ನವದೆಹಲಿ(ಜು.23]: ಉತ್ತರ ಪ್ರದೇಶದ ತೆಂಡ್ವಿ ಗ್ರಾಮದಲ್ಲಿ ಹಾಲು ಮಾರುವ ಹಂಸರಾಜ್ ಗಿರಿ ಅವರ ಪುತ್ರ ಸಚಿನ್ ಗಿರಿ, ತಂದೆಯ ಕನಸನ್ನು ನನಸಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸಚಿನ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಬಾಲ್ಯದಲ್ಲಿ ಶಾಲೆಗೆ ಚಕ್ಕರ್ ಹೊಡೆದು, ತಂದೆಯೊಂದಿಗೆ ಸೇರಿ ಬೆಳಗ್ಗೆ ಮತ್ತು ಸಂಜೆ ಹಾಲಿನ ವ್ಯಾಪಾರ ಮಾಡುತ್ತಿದ್ದ ಸಚಿನ್‌ಗೆ ಕುಸ್ತಿ ಕಲಿಯಬೇಕೆಂಬ ಆಸೆಯಾಯಿತು. ಸ್ವತಃ ಮಾಜಿ ಕುಸ್ತಿಪುಟುವಾಗಿದ್ದ ಹಂಸ್‌ರಾಜ್ ಪುತ್ರನ ಆಸೆಗೆ ಒಪ್ಪಿ, ಅದೇ ದಿನವೇ ಗ್ರಾಮದಲ್ಲಿದ್ದ ಗರಡಿ ಮನೆಗೆ ಸೇರಿಸಿದರು. ಅಲ್ಲಿಂದ ಇಲ್ಲಿ ವರೆಗೂ ಸಚಿನ್‌ಗೆ ಕುಸ್ತಿ ಯೊಂದನ್ನು ಬಿಟ್ಟರೆ ಮನೆಯ ಯಾವುದೇ ಕೆಲಸವನ್ನು ಹೇಳಲಿಲ್ಲ. ಕಠಿಣ ಶ್ರಮ ಹಾಗೂ ಶ್ರದ್ಧೆ ವಹಿಸಿ ಕುಸ್ತಿಯನ್ನು ಕರಗತ ಮಾಡಿಕೊಂಡ ಸಚಿನ್, ವಾರಣಾಸಿ ಸುತ್ತಲಿನ ಹಳ್ಳಿಗಳಲ್ಲಿನ ಮಣ್ಣಿನ ಕುಸ್ತಿ ಕೂಟಗಳಲ್ಲಿ ಗೆದ್ದು ಮೆಚ್ಚುಗೆ ಗಳಿಸಿದರು.

ಕುಸ್ತಿಯಿಂದ ಬರುತ್ತಿದ್ದ ನಗದು ಬಹುಮಾನವನ್ನು ಸಚಿನ್ ತಂದೆಗೆ ಒಪ್ಪಿಸುತ್ತಿದ್ದರು. ಹಂಸರಾಜ್ ಈ ಹಣದಿಂದ ಸಚಿನ್'ಗೆ ವಿಶೇಷ ಆಹಾರವನ್ನು ನೀಡುವ ಮೂಲಕ ಮಗನ ಕುಸ್ತಿಗೆ ನೆರವಾಗುತ್ತಿದ್ದರು. ಈ ವೇಳೆ ಮಾತನಾಡಿದ ತಂದೆ ಹಂಸರಾಜ್ ನನ್ನ ಮಗ ಒಂದಲ್ಲ ಒಂದು ದಿನ ದೇಶಕ್ಕೆ ಪದಕ ತಂದುಕೊಡುತ್ತಾನೆ ಎಂಬ ಕನಸನ್ನು ಪುತ್ರ ಸಚಿನ್ ನನಸು ಮಾಡಿದ್ದಾರೆ. ಸಚಿನ್ ಶನಿವಾರ ನಡೆದ 65 ಕೆಜಿ ಪುರುಷರ ಫ್ರಿಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ.
‘ಸಚಿನ್ ಪ್ರದರ್ಶನ ಮ್ಯಾಟ್‌ನಲ್ಲಿ ಅತ್ಯುತ್ತಮವಾಗಿದೆ. ಸದ್ಯ ಸಚಿನ್ ಎದುರಾಳಿ ಕಾಲುಗಳನ್ನು ಹೇಗೆ ಕಟ್ಟಿಹಾಕಬೇಕು ಎಂಬ ತಂತ್ರಗಳನ್ನು ತಿಳಿದು ಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಉತ್ತಮ ಪ್ರದರ್ಶನ ತೋರಲಿದ್ದಾರೆ’ ಎಂದು ಕೋಚ್ ರವೀಂದ್ರ ಮಿಶ್ರಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios