ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್​​​​ ಕೊಹ್ಲಿ ವಿಶ್ವದ ಶ್ರೇಷ್ಠ  ಬ್ಯಾಟ್ಸ್​​ಮನ್​. ಈತನ ಆಟಕ್ಕೆ ವಿಶ್ವವೇ ಸಲಾಂ ಹೊಡೆಯುತ್ತೆ. ಹೀಗಿರುವಾಗ ನಮ್ಮ ಭಾರತದಲ್ಲೇ ಮತ್ತೊಬ್ಬ ವಿರಾಟ್​​ ಕೊಹ್ಲಿ ರೆಡಿಯಾಗ್ತಿದ್ದಾನೆ. ಟೀಂ ಇಂಡಿಯಾ ನಾಯಕನನ್ನೇ ಮೀರಿಸುವಂತಹ ಒಬ್ಬ ಅದ್ಭುತ ಬ್ಯಾಟ್ಸ್'​​​​ಮನ್​​​ ತಯಾರಾಗುತ್ತಿದ್ದಾನೆ. ಭಾರತ ಎ ತಂಡಕ್ಕೆ ಲಗ್ಗೆ ಹಾಕಿರುವ ಈ ಪ್ರತಿಭೆ ಸೀನಿಯರ್ ಟೀಮ್'ಗೆ ಯಾವಾಗ ಬೇಕಾದರೂ ಸೆಲೆಕ್ಟ್ ಆಗಬಹುದು.

ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್​​​​ ಕೊಹ್ಲಿಯನ್ನ ಮೀರಿಸೋ ಆಟಗಾರ ವಿಶ್ವದಲ್ಲೆಲ್ಲಾದ್ರೂ ಇದ್ದಾನಾ ಅಂತ ಯಾರನ್ನೇ ಕೇಳಿದ್ರು ಅದಕ್ಕೆ ಉತ್ತರ ನೋ ಎಂದೇ ಇರುತ್ತದೆ. ಕೊಹ್ಲಿಗೆ ಕೊಹ್ಲಿಯೇ ಸಾಟಿ ಎನ್ನುತ್ತಾರೆ. ಕೊಹ್ಲಿ ಕ್ರೀಸ್'​​ಗಿಳಿದ್ರೆ ಎಂಥ ಬೌಲರ್​​​ ಆದ್ರೂ ಗಪ್​ಚುಪ್​​. ಪಂದ್ಯವನ್ನ ಮುಗಿಸೇ ಕೊಹ್ಲಿ ಮತ್ತೆ ಡ್ರಸ್ಸಿಂಗ್​​​ ರೂಂಗೆ ಮರಳೋದು. ಇಂತಹ ಆಟಗಾರ ನಮ್ಮ ತಂಡದಲ್ಲೂ ಇರಬಾರದಿತ್ತ ಎಂದು ಎಷ್ಟೋ ಕ್ರಿಕೆಟ್​​​​ ಸಂಸ್ಥೆಗಳು ಪರಿತಪಿಸಿವೆ. ಟೋಟಲ್ಲಾಗಿ ಹೇಳಬೇಕಾದ್ರೆ ವರ್ಲ್ಡ್ಸ್ ಬೆಸ್ಟ್ ಬ್ಯಾಟ್ಸ್'ಮ್ಯಾನ್ ನಮ್ಮ ವಿರಾಟ್​​​ ಕೊಹ್ಲಿ.

ರೆಡಿಯಾಗಿದ್ದಾನೆ ಕೊಹ್ಲಿಯನ್ನೇ ಮಿರಿಸೋ ಬ್ಯಾಟ್ಸ್​​ಮನ್​​​..!
ವಿಶ್ವ ಶ್ರೇಷ್ಠ ಬ್ಯಾಟ್ಸ್​'​ಮನ್​​ ವಿರಾಟ್​​ ಕೊಹ್ಲಿಯನ್ನೇ ಮಿರಿಸೋ ಬ್ಯಾಟ್ಸ್'​​ಮನ್ವೊಬ್ಬ​ ಭಾರತದಲ್ಲೇ ರೆಡಿಯಾಗ್ತಿದ್ದಾನೆ. ಕೊಹ್ಲಿಯಷ್ಟೇ ಅಗ್ರೆಸ್ಸೀವ್​​, ಪವರ್​​​, ಬ್ಯಾಟಿಂಗ್​​ ಸ್ಟೈಲ್​​ ಇರೋ ಮತ್ತೊಬ್ಬ ಯುವ ಆಟಗಾರನೊಬ್ಬ ಟೀಂ ಇಂಡಿಯಾಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾನೆ. ಈ ಆಟಗಾರನೇ ಪಂಜಾಬ್'ನ ಶುಬ್'ಮನ್ ಗಿಲ್. ಈತ ಅಂಡರ್-19 ಕ್ರಿಕೆಟ್'ನಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸುತ್ತಿದ್ದಾನೆ. ಈತ ಈಗ ಭಾರತ ಎ ತಂಡಕ್ಕೆ ಲಗ್ಗೆ ಇಟ್ಟಿದ್ದಾನೆ. ಅ. 6ರಿಂದ ನಡೆಯುವ ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗೆ ಈತನನ್ನು ಆಯ್ಕೆ ಮಾಡಲಾಗಿದೆ.

ದ್ರಾವಿಡ್ ಗರಡಿಯಲ್ಲಿ...
ಶುಬ್'​ಮನ್​​ ಗಿಲ್​ ಈಗ ಭಾರತದ ಕ್ರಿಕೆಟ್​​ ಪ್ರೇಮಿಗಳನ್ನ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ತನ್ನ ಅದ್ಭುತ ಬ್ಯಾಟಿಂಗ್​​ನಿಂದ ವಿಶ್ವದ ಗಮನ ಸೆಳೆಯುತ್ತಿದ್ದಾನೆ. ಆದ್ರೆ ಶುಬ್'​ಮನ್​​ ಗಿಲ್'ನನ್ನು​ ಮಿನಿ ವಿರಾಟ್​​ ಕೊಹ್ಲಿಯನ್ನಾಗಿಸಿರೋದು ಮಾತ್ರ ಬಿಸಿಸಿಐನ ದ್ರೋಣಾಚಾರ್ಯ ರಾಹುಲ್​​ ದ್ರಾವಿಡ್​​.

ರಾಹುಲ್​ ದ್ರಾವಿಡ್'​​ನ ಗರಡಿಯಲ್ಲಿ ಪಳಗುತ್ತಿರುವ ಗಿಲ್​​ ತನ್ನ ಗುರು ಹೇಳಿದಂತೆ ಕೇಳುತ್ತಿದ್ದಾರೆ. ಇನ್ನು, ಮತ್ತೊಬ್ಬ ವಿರಾಟ್​​ ಕೊಹ್ಲಿಯನ್ನ ತಯಾರಿಸಲೇಬೇಕೆಂದು ಪಣ ತೊಟ್ಟಿರುವ ದ್ರಾವಿಡ್​​ ಆ ಕಾರ್ಯಕ್ಕೆ ಗಿಲ್'​ರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ದ್ರಾವಿಡ್​​ ಈ ಮಹಾನ್​ ಕಾರ್ಯದಲ್ಲಿ ಎಷ್ಟು ಯಶಸ್ವಿಯಾಗಿದ್ದಾರೆ ಅನ್ನೋದಕ್ಕೆ ಮೊನ್ನೆ ಮುಕ್ತಾಯವಾದ ಇಂಗ್ಲೆಂಡ್​​​ ಅಂಡರ್​​​ 19 ವಿರುದ್ಧದ ಸರಣಿ.

ರನ್ ಮೆಷೀನ್:
ಇಂಗ್ಲೆಂಡ್'ನಲ್ಲಿ ನಡೆದ ಇಂಗ್ಲೆಂಡ್​​ ಅಂಡರ್​​ 19 ತಂಡದ ವಿರುದ್ಧದ ಸರಣಿಯಲ್ಲಿ ಶುಬ್​ಮನ್​​ ಗಿಲ್​ ಒಟ್ಟು 4 ಇನ್ನಿಂಗ್ಸ್'​​​ಗಳಲ್ಲಿ ಬರೊಬ್ಬರಿ 278ರನ್​ಗಳನ್ನ ಕಲೆಹಾಕಿದ್ದಾರೆ. 93 ರನ್ ಸರಾಸರಿ ಹಾಗೂ ​​ 108 ಸ್ಟ್ರೈಕ್​ ರೇಟ್'ನಲ್ಲಿ ಇವರು ರನ್ ಕಲೆಹಾಕಿದ್ದಾರೆ. ಇದರಲ್ಲಿ 1 ಶತಕ ಮತ್ತು 1 ಅರ್ಧಶತಕ ಕೂಡ ಕೂಡಿದೆ. 147 ಅವರ ಬೆಸ್ಟ್​​ ಸ್ಕೋರ್​​ ಆಗಿದೆ.

ಅದಕ್ಕೂ ಮೊದಲು ಭಾರತದಲ್ಲಿ ಅದೇ ತಂಡದ ವಿರುದ್ಧ ನಡೆದ ಸರಣಿಯಲ್ಲಿ ಗಿಲ್ ಬರೋಬ್ಬರಿ 117 ರನ್ ಸರಾಸರಿಯಂತೆ 351 ರನ್ ಚಚ್ಚಿದ್ದ. ಸತತ 2 ಶತಕಗಳನ್ನು ಭಾರಿಸಿದ್ದ.

ಈ ರೆಕಾರ್ಡ್​ ನೋಡಿದ್ರೆನೇ ಗೊತ್ತಾಗುತ್ತೆ ದ್ರಾವಿಡ್​​​ ಗರಡಿಯಲ್ಲಿ ಮಿನಿ ಕೊಹ್ಲಿ ಹೇಗೆ ರೆಡಿಯಾಗ್ತಿದ್ದಾನೆ ಅಂತ. ಸದ್ಯ ವಿಶ್ವ ಕ್ರಿಕೆಟ್​​ನಲ್ಲಿ ಕೇವಲ ಶುಬ್​'ಮನ್​​ ಗಿಲ್'​ನದ್ದೇ ಮಾತಾಗಿಬಿಟ್ಟಿದೆ. ಒಬ್ಬ ಕೊಹ್ಲಿಯ ಕಾಟವೇ ತಾಳಲಾಗುತ್ತಿಲ್ಲ. ಇನ್ನು ಮತ್ತೊಬ್ಬ ಕೊಹ್ಲಿ ಬಂದ್ರೆ ನಮ್ಮ ತಂಡಗಳ ಕಥೆ ಏನು ಅಂತ ಕೈ ಕೈ ಹಿಸಿಕಿಕೊಳ್ಳುತ್ತಿವೆ ಎಲ್ಲಾ ದೇಶದ ಕ್ರಿಕೆಟ್​​​ ಸಂಸ್ಥೆಗಳು.

- ಅಮಿತ್ ನೆಲಗದರನಹಳ್ಳಿ, ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್