ಕೊನೆಯ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಅಯ್ಯರ್ ಕೇವಲ 210 ಎಸೆತಗಳಲ್ಲಿ ಅಜೇಯ 202 ರನ್ ಬಾರಿಸಿ ಗಮನ ಸೆಳೆದರು. ಅವರ ಆಕರ್ಷಕ ಇನಿಂಗ್ಸ್'ನಲ್ಲಿ 27 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್'ಗಳೂ ಸೇರಿದ್ದವು.
ಮುಂಬೈ(ಫೆ.19): ಆಸ್ಟ್ರೇಲಿಯಾ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅತಿ ವೇಗದ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಬಾರ್ಬೋನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನ 85 ರನ್'ಗಳಿಸಿ ಕೊನೆಯ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಅಯ್ಯರ್ ಕೇವಲ 210 ಎಸೆತಗಳಲ್ಲಿ ಅಜೇಯ 202 ರನ್ ಬಾರಿಸಿ ಗಮನ ಸೆಳೆದರು. ಅವರ ಆಕರ್ಷಕ ಇನಿಂಗ್ಸ್'ನಲ್ಲಿ 27 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್'ಗಳೂ ಸೇರಿದ್ದವು.
ಈ ಹಿಂದೆ 2015ರ ಐಪಿಎಲ್ ಹರಾಜಿನಲ್ಲಿ ಅಯ್ಯರ್ ಅವರನ್ನು ತಂಡ 2.6 ಕೋಟಿ ರೂಪಾಯಿ ಮೊತ್ತಕ್ಕೆ ಡೆಲ್ಲಿ ಡೇರ್'ಡೆವಿಲ್ಸ್ ತಂಡ ಖರೀದಿಸಿದಾಗ ಸಾಕಷ್ಟು ಸುದ್ದಿಗೆ ಕಾರಣರಾಗಿದ್ದರು.
2014-15 ನೇ ಸಾಲಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಅಯ್ಯರ್ 2015-16ರ ರಣಜಿ ಆವೃತ್ತಿಯಲ್ಲಿ 1321 ರನ್ ಬಾರಿಸುವ ಮೂಲಕ ಮುಂಬೈ ತಂಡ 41ನೇ ರಣಜಿ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
