ಕೆಲವು ಹುಡುಗಿಯರಿಗೆ ಮೀಸೆ ಇರುವ ಹುಡುಗರು ಇಷ್ಟ. ಇನ್ನು ಕೆಲವರಿಗೆ ಕ್ಲೀನ್‌ ಶೇವ್‌ ಮಾಡಿರೋ ಸ್ಮಾರ್ಟ್‌ ಬಾಯ್‌್ಸ ಇಷ್ಟ. ಅದೇ ಥರ ಹೀರೋಯಿನ್‌ಗಳಿಗೂ ಕೆಲವು ಆಸೆಗಳಿರುತ್ತವೆ. ಆ ಆಸೆಯನ್ನು ಸದ್ಯ ಬಹಿರಂಗ ಪಡಿಸಿದ್ದು ಬಾಲಿವುಡ್‌ನ ಟಾಪ್‌ ಹೀರೋಯಿನ್‌ ಅನುಷ್ಕಾ ಶರ್ಮಾ. ಆಕೆ ತನ್ನ ಬಾಯ್‌ಫ್ರೆಂಡ್‌ ವಿರಾಟ್‌ ಕೊಹ್ಲಿಗೆ ಗಡ್ಡ ತೆಗೆದ್ರೆ ಸಾಯಿಸಿಬಿಡ್ತೀನಿ ಅನ್ನೋದನ್ನು ಸೂಚ್ಯವಾಗಿ ಹೇಳಿ ತನಗೆ ಕೊಹ್ಲಿಯ ಗಡ್ಡ ಇಷ್ಟಅನ್ನೋದನ್ನು ಜಗತ್ತಿಗೆ ಸಾರಿದ್ದಾಳೆ.

ಇದರ ಹಿಂದೆ ಒಂದು ಇಂಟರೆಸ್ಟಿಂಗ್‌ ಕತೆ ಇದೆ. ಈ ಹಿಂದೆ ಕ್ರಿಕೆಟ್‌ನ ಟಾಪ್‌ ಆಟಗಾರರೆಲ್ಲಾ ಗಡ್ಡ ಬಿಟ್ಟು ಸಾಲಿಡ್‌ ಗಡ್ಡಧಾರಿಗಳಾಗಿದ್ದರು. ಅದನ್ನು ನೋಡಿ ಲಕ್ಷಾಂತರ ಮಂದಿ ಅದೇ ಥರ ಗಡ್ಡ ಬಿಟ್ಟಿದ್ದರಿಂದ ಬಿಯರ್ಡ್‌ ಟ್ರೆಂಡ್‌ ಶುರುವಾಗಿತ್ತು. ಆದರೆ ಇತ್ತೀಚೆಗೆ ರವೀಂದ್ರ ಜಡೇಜ, ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ ಮುಂತಾದವರು ಗಡ್ಡ ತೆಗೆದು ಕ್ಲೀನ್‌ ಕಿಸ್ನಪ್ಪರಾಗಿದ್ದರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ರವೀಂದ್ರ ಜಡೇಜ ಬ್ರೇಕ್‌ ದ ಬಿಯರ್ಡ್‌ ಅಂತ ಸಾಮಾಜಿಕ ಜಾಲತಾಣದಲ್ಲಿ ಸವಾಲನ್ನೆಸೆದಿದ್ದರು.

ಆದರೆ ವಿರಾಟ್‌ ಕೊಹ್ಲಿ ಅದಕ್ಕೆ ಉತ್ತರಿಸುತ್ತಾ, ಸಾರಿ ಬಾಯ್ಸ್, ನಾನಿನ್ನೂ ಗಡ್ಡ ತೆಗೆಯಲು ಸಿದ್ಧನಾಗಿಲ್ಲ ಎಂದು ಬರೆದು­ಕೊಂಡಿ­ದ್ದರು. ಇಂಟರೆ­ಸ್ಟಿಂಗ್‌ ಅಂದ್ರೆ ವಿರಾಟ್‌ ಕೊಹ್ಲಿ ಆ ಸ್ಟೇಟಸ್‌ ಹಾಕಿದ ತಕ್ಷಣ ಇದುವರೆಗೆ ಯಾವ ಸ್ಟೇಟಸ್ಸಿಗೂ ಪ್ರತಿಕ್ರಿ­ಯಿಸದ ಅನುಷ್ಕಾ ಗಡ್ಡ ತೆಗೆಯಕೂಡದು ಎಂದು ಕಮೆಂಟ್‌ ಹಾಕಿದರು. ಒಂದೇ ಸೆಕೆಂಡು. ವಿರಾಟ್‌ ಕುಮಾರರು ಓಕೇ ಎಂದುಬಿಟ್ಟರು. ಇವರಿಬ್ಬರ ಈ ಮಾತುಗಳನ್ನು ಕೇಳಿ ಅವರಿಬ್ಬರ ಅಭಿಮಾನಿಗಳಂತೂ ರೇಗಿಸಿದ್ದೇ ರೇಗಿಸಿದ್ದು

ವರದಿ: ಕನ್ನಡಪ್ರಭ, ಸಿನಿವಾ