2002ರ ಕಾಮನ್‌'ವೆಲ್ತ್ ಗೇಮ್ಸ್‌'ನಿಂದ ಇದುವರೆಗೂ ಭಾರತೀಯ ಶೂಟರ್‌'ಗಳು ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಪದಕಗಳನ್ನು ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ಲಾಸ್ಗೋದಲ್ಲಿ ನಡೆದ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಭಾರತದ ಶೂಟರ್'ಗಳು 17 ಪದಕ ಜಯಿಸಿದ್ದರು.
ದುಬೈ(ಡಿ.22): ಕಾಮನ್'ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತವೊಂದು ಎದುರಾಗಿದ್ದು, 2022ರ ಟೂರ್ನಿಯಲ್ಲಿ ಶೂಟಿಂಗ್ ಕೈಬಿಡಲಾಗಿದ್ದು ಮಿಶ್ರ ಟಿ20 ಕ್ರಿಕೆಟ್ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ದುಬೈನಲ್ಲಿ ನಡೆದ ಸಭೆ ವೇಳೆ ಆಯೋಜಕರು ಈ ನಿರ್ಣಯಕ್ಕೆ ಬಂದಿದ್ದಾರೆ. ಆಯೋಜಕರ ಈ ನಿರ್ಧಾರದಿಂದ ಭಾರತಕ್ಕೆ ಭಾರೀ ನಿರಾಸೆಯುಂಟಾಗಿದೆ. 2002ರ ಕಾಮನ್'ವೆಲ್ತ್ ಗೇಮ್ಸ್'ನಿಂದ ಇದುವರೆಗೂ ಭಾರತೀಯ ಶೂಟರ್'ಗಳು ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದು, ಪದಕಗಳನ್ನು ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ಲಾಸ್ಗೋದಲ್ಲಿ ನಡೆದ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಭಾರತದ ಶೂಟರ್'ಗಳು 17 ಪದಕ ಜಯಿಸಿದ್ದರು.
ಕೂಟದಲ್ಲಿರುವ ಆಟಗಳ ಪಟ್ಟಿಯನ್ನು ಅಂತಿಮಗೊಳಿಸಲು ಮುಂದಿನ ವರ್ಷದ ಕೊನೆಯ ತನಕ ಅವಕಾಶವಿದ್ದು, ಶೂಟಿಂಗ್'ಗೆ ಮತ್ತೆ ಸ್ಥಾನ ಲಭಿಸುವ ಸಾಧ್ಯತೆಯಿದೆ. ಆದರೆ, ಇದಕ್ಕೆ ಅಂತಾರಾಷ್ಟ್ರೀಯ ಶೂಟಿಂಗ್ ಸಂಸ್ಥೆ ಕಸರತ್ತು ನಡೆಸಿಬೇಕಿದೆ.
