ಹರ್ಯಾಣ ಮೂಲದ ಅನಿಶ್ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಕೆಲದಿನಗಳ ಹಿಂದಷ್ಟೇ 10 ಮೀಟರ್ ಏರ್'ರೈಪಲ್ಸ್ ವಿಭಾಗದಲ್ಲಿ ಮನು ಬಾರ್ಕರ್ ದೇಶಕ್ಕೆ ಚಿನ್ನ ಗೆದ್ದುಕೊಟ್ಟ ಕಿರಿಯ ಕ್ರೀಡಾಪಟು ಎನ್ನುವ ದಾಖಲೆಗೆ ಪಾತ್ರರಾಗಿದ್ದರು.
ಕಾಮನ್'ವೆಲ್ತ್ ಗೇಮ್ಸ್'ನಲ್ಲಿ 15 ವರ್ಷದ ಅನಿಶ್ ಭಾನ್ವಾಲ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಾಮನ್'ವೆಲ್ತ್'ನಲ್ಲಿ ದೇಶಕ್ಕೆ ಚಿನ್ನಗೆದ್ದುಕೊಟ್ಟ ಅತಿಕಿರಿಯ ಅಥ್ಲೀಟ್ ಎನ್ನುವ ಗೌರವಕ್ಕೆ ಅನಿಶ್ ಪಾತ್ರರಾಗಿದ್ದಾರೆ.
ಹರ್ಯಾಣ ಮೂಲದ ಅನಿಶ್ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಕೆಲದಿನಗಳ ಹಿಂದಷ್ಟೇ 10 ಮೀಟರ್ ಏರ್'ರೈಪಲ್ಸ್ ವಿಭಾಗದಲ್ಲಿ ಮನು ಬಾರ್ಕರ್ ದೇಶಕ್ಕೆ ಚಿನ್ನ ಗೆದ್ದುಕೊಟ್ಟ ಕಿರಿಯ ಕ್ರೀಡಾಪಟು ಎನ್ನುವ ದಾಖಲೆಗೆ ಪಾತ್ರರಾಗಿದ್ದರು.
ಇನ್ನು ಮಹಿಳಾ ಶೂಟರ್'ಗಳಾದ ತೇಜಸ್ವಿನಿ ಸಾವಂತ್ ಹಾಗೂ ಅಂಜುಮ್ ಮೌದ್ಗಿಲ್ 50ಮೀಟರ್ ರೈಪಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಶೈನಾ ನೆಹ್ವಾಲ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅದೇರೀತಿ ಬಾಕ್ಸಿಂಗ್'ನಲ್ಲಿ ಮನೀಶ್ ಕೌಶಿಕ್ ಬಾಕ್ಸಿಂಗ್ 60 ಕೆ.ಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.