ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶೋಯಿಬ್ ಮಲ್ಲಿಕ್ ದಾಖಲೆ

First Published 2, Jul 2018, 4:18 PM IST
Shoaib Malik becomes first to play 100 T20 Internationals
Highlights

ಗರಿಷ್ಠ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡೋ ಮೂಲಕ ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ದಾಖಲೆ ಬರೆದಿದ್ದಾರೆ. ಗರಿಷ್ಠ ಟಿ20 ಪಂದ್ಯ ಆಡಿದ ಟಾಪ್ 3 ಕ್ರಿಕೆಟಿಗರಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ ಕೂಡ ಸ್ಥಾನ ಪಡೆದಿದ್ದಾರೆ. ಹಾಗಾದರೆ ಆ ಕ್ರಿಕೆಟಿಗ ಯಾರು? ಇಲ್ಲಿದೆ ಗರಿಷ್ಠ ಟಿ20 ಪಂದ್ಯದ ಡೀಟೇಲ್ಸ್.

ಹರಾರೆ(ಜು.02): ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಆಲ್‌ಲೌಂಡರ್ ಶೋಯಿಬ್ ಮಲ್ಲಿಕ್ ದಾಖಲೆ ಬರೆದಿದ್ದಾರೆ. ಜಿಂಬಾಬ್ವೆ, ಆಸ್ಟೇಲಿಯಾ ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ ಆಸಿಸ್ ವಿರುದ್ಧದ 2ನೇ ಪಂದ್ಯ  ಆಡೋ ಮೂಲಕ ಗರಿಷ್ಠ ಟಿ20 ಪಂದ್ಯ ಆಡಿದ ದಾಖಲೆ ನಿರ್ಮಿಸಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯ ಶೋಯಿಬ್ ಮಲ್ಲಿಕ್ ಪಾಲಿಗೆ 100ನೇ ಟಿ20 ಪಂದ್ಯ. ಈ ಮೂಲಕ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ದಾಖಲೆಯನ್ನ ಮುರಿದಿದ್ದಾರೆ. ಅಫ್ರಿದಿ ಓಟ್ಟು 99 ಟಿ20 ಪಂದ್ಯ ಆಡಿದ್ದಾರೆ.

100ನೇ ಪಂದ್ಯದಲ್ಲಿ ಶೋಯಿಬ್ ಮಲ್ಲಿಕ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಕೇವ 13 ರನ್‌ಗಳಿಸಿ ರನೌಟ್‌ಗೆ ಬಲಿಯಾದರು. ಇಷ್ಟೇ ಅಲ್ಲ ಈ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿದೆ.

ಶೋಯಿಬ್ ಮಲ್ಲಿಕ್ 100 ಟಿ20 ಪಂದ್ಯ ಆಡೋ ಮೂಲಕ ಗರಿಷ್ಟ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಹೆಗ್ಗಳಿಕೆಗೆ ಪಾತ್ರರಾದರೆ, ಶಾಹಿದ್ ಅಫ್ರಿದಿ 99 ಪಂದ್ಯ ಆಡೋ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ 90 ಪಂದ್ಯ ಆಡೋ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

loader