ಪಿಸಿಬಿ ರಾಯಭಾರಿಯಾಗಿ ಅಖ್ತರ್ ಆಯ್ಕೆ; ಆದರೆ ಅಭಿಮಾನಿಗಳಿಂದ ಆಕ್ರೋಶದ ಸ್ವಾಗತ..!

First Published 19, Feb 2018, 4:29 PM IST
Shoaib Akhtar Appointed PCB Brand Ambassador Fans Say Bad Choice
Highlights

ಆದರೆ ಅಖ್ತರ್ ಆಯ್ಕೆಯನ್ನು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ. ಆಡಳಿತ ಮಂಡಳಿಯನ್ನು ಹಾಗೂ ಆಟಗಾರರನ್ನು ಸದಾ ಟೀಕಿಸುವ ಅಖ್ತರ್ ಅವರನ್ನು ನೇಮಿಸಿದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೆಟ್ಟ ತೀರ್ಮಾನವಾಗಿದೆ ಎಂದು ಪಾಕಿಸ್ತಾನದ ಅಭಿಮಾನಿಯೊಬ್ಬ ಟೀಕಿಸಿದ್ದಾನೆ.

ಇಸ್ಲಾಮಾಬಾದ್(ಫೆ.19): ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್'ರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಜತೆಗೆ ಪಿಸಿಬಿ ಅಧ್ಯಕ್ಷರ ಸಲಹೆಗಾರರ ಹುದ್ದೆಯನ್ನು ನೀಡಲಾಗಿದೆ.

ಈ ವಿಷಯವನ್ನು ಪಿಸಿಬಿ ಅಧ್ಯಕ್ಷ ನಜಾಮ್ ಸೇಥಿ ಟ್ವೀಟ್ ಮುಖಾಂತರ ಪ್ರಕಟಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶೋಯಬ್, ‘ರಾಯಭಾರಿ ಹಾಗೂ ಸಲಹೆಗಾರರ ಹುದ್ದೆಯನ್ನು ನೀಡಿರುವುದು ಗೌರವನ್ನುಂಟು ಮಾಡಿದೆ. ಎಷ್ಟು ಶ್ರದ್ಧೆಯಿಂದ ಕ್ರಿಕೆಟ್ ಆಡಿದೆನೋ, ಅಷ್ಟೇ ಶ್ರದ್ಧೆಯಿಂದ ಮಂಡಳಿ ನೀಡಿರುವ ಹುದ್ದೆಯನ್ನು ನಿರ್ವಹಿಸುತ್ತೇನೆ’ ಎಂದಿದ್ದಾರೆ.

loader