ದಂಪತಿಗಳಿಬ್ಬರು ಮುದ್ದು ಮುಖದ ಜೋರವರ್'ನನ್ನು ಎತ್ತಿ ಆಡಿಸಿದ್ದು ಸಮಾರಂಭದಲ್ಲಿ ಗಮನ ಸೆಳೆಯಿತು
ನಿನ್ನೆಯಷ್ಟೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕ ಶರ್ಮಾ'ರ ಆರತಕ್ಷತೆ ನವದೆಹಲಿಯ ತಾಜ್ ಹೋಟೆಲ್'ನಲ್ಲಿ ಅದ್ಧೂರಿಯಾಗಿ ನರೆವೇರಿತು. ಪ್ರಧಾನಿ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಖ್ಯಾತನಾಮರು ಸಮಾರಂಭಕ್ಕೆ ಆಗಮಿಸಿ ದಂಪತಿಗಳಿಗೆ ಶುಭ ಕೋರಿದರು.
ಈ ಸಮಾರಂಭದಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಕುಟುಂಬ ಸಮೇತ ಆಗಮಿಸಿದ್ದರು. ಆರತಕ್ಷತೆಯಲ್ಲಿ ಹೆಚ್ಚು ಗಮನ ಸೆಳೆದಿದ್ದು ಧವನ್ ಪುತ್ರ ಜೋರವರ್ ಧವನ್. ದಂಪತಿಗಳಿಬ್ಬರು ಮುದ್ದು ಮುಖದ ಜೋರವರ್'ನನ್ನು ಎತ್ತಿ ಆಡಿಸಿದರು. ಇದರಲ್ಲಿ ಅನುಷ್ಕ ಜೋರವರ್'ನನ್ನು ಎತ್ತಿಕೊಂಡಿದ್ದು ಅತಿಥಿಗಳ ಗಮನ ಸೆಳೆಯಿತು. ಮಾಧ್ಯಮದವರು ಅನುಷ್ಕ ಜೋರವರ್'ನನ್ನು ಎತ್ತಿಕೊಂಡಿದ್ದ ಫೋಟೊವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರು. ಈ ಭಾವಚಿತ್ರ ಈಗ ಎಲ್ಲಡೆ ವೈರಲ್ ಆಗಿದೆ.


