ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು 2-1 ರಿಂದ ಸರಣಿ ಗೆದ್ದುಕೊಂಡಿತ್ತು. ಜುಲೈ 26 ರಿಂದ ಟೀ ಇಂಡಿಯಾ ಶ್ರೀಲಂಕಾ ವಿರುದ್ಧ 3 ಟೆಸ್ಟ್, 5 ಏಕದಿನ ಹಾಗೂ 1 ಟಿ20 ಪಂದ್ಯಗಳನ್ನು ಆಡಲಿದೆ.

ಮುಂಬೈ(ಜು.17): ಗಾಯದ ಸಮಸ್ಯೆಯಿಂದಾಗಿ ಜುಲೈ 26 ರಿಂದ ನಡೆಯುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದ ಪ್ರಮುಖ ಟೆಸ್ಟ್ ಆಟಗಾರ ಮುರುಳಿ ವಿಜಯ್ ಹೊರಗುಳಿದಿದ್ದು, ಅವರ ಬದಲಿಗೆ ಏಕದಿನ ಪಂದ್ಯದ ಆರಂಭಿಕ ಆಟಗಾರ ಶಿಖರ್ ಧವನ್ ಸೇರ್ಪಡೆಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮುರುಳಿ ವಿಜಯ್ ಅವರಿಗೆ ಬಲ ಮೊಣಕೈ'ಗೆ ಗಂಭೀರ ಗಾಯವಾದ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯಗಳಿಗೆ ಬಿಡುವು ನೀಡಲಾಗಿದ್ದು, ವೈದ್ಯರ ಸಲಹೆ ಮೇರೆಗೆ ಕೆಲ ದಿನಗಳ ಕಾಲ ಮುರುಳಿ ವಿಜಯ್ ಅವರು ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು 2-1 ರಿಂದ ಸರಣಿ ಗೆದ್ದುಕೊಂಡಿತ್ತು. ಜುಲೈ 26 ರಿಂದ ಟೀ ಇಂಡಿಯಾ ಶ್ರೀಲಂಕಾ ವಿರುದ್ಧ 3 ಟೆಸ್ಟ್, 5 ಏಕದಿನ ಹಾಗೂ 1 ಟಿ20 ಪಂದ್ಯಗಳನ್ನು ಆಡಲಿದೆ. ಶಿಖರ್ ಧವನ್ ಅವರಿಗೆ 2016 ಅಕ್ಟೋಬರ್'ನಲ್ಲಿ ಕೋಲ್ಕತ್ತಾದಲ್ಲಿ ನ್ಯೂಜಿಲ್ಯಾಂಡ್' ವಿರುದ್ಧ ನಡೆದ ಟೆಸ್ಟ್ ಪಂದ್ಯವೇ ಅಂತಿಮ ಪಂದ್ಯವಾಗಿತ್ತು. ತದ ನಂತರ ಗಾಯದ ಸಮಸ್ಯೆಗಳಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸರಣಿಗಳಿಂದ ತಂಡದಿಂದ ಹೊರಗುಳಿದಿದ್ದರು.