ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ವಿರುದ್ಧ 3 ಇನಿಂಗ್ಸ್'ನಲ್ಲಿ ಕೇವಲ 86 ರನ್ ಬಾರಿಸಿದ್ದ ರಾಹುಲ್, ಆಫ್ರಿಕಾದ ಬೌನ್ಸಿ ಪಿಚ್'ನಲ್ಲಿ ಯಾವ ರೀತಿಯ ಪ್ರದರ್ಶನ ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಕೇಪ್‌'ಟೌನ್(ಡಿ.30): ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಮೊದಲ ಆಘಾತ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನವರಿ 5ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಧವನ್ ಹೊರಬಿದ್ದಿದ್ದಾರೆ. ಮುಂಬೈ'ನ ಹೋಟೆಲ್‌'ನಲ್ಲಿ ಧವನ್ ಮೊಣಕಾಲಿಗೆ ಗಾಯಮಾಡಿಕೊಂಡಿದ್ದರು. ಧವನ್‌'ಗೆ ಕನಿಷ್ಠ 10 ದಿನಗಳ ವಿಶ್ರಾಂತಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಧವನ್ ಮೊದಲ ಪಂದ್ಯದಿಂದ ಹೊರಬಿದ್ದಿರುವುದು, ಧವನ್ ಸ್ಥಾನವನ್ನು ಕೆ.ಎಲ್ ರಾಹುಲ್ ತುಂಬಲಿದ್ದಾರೆ.

ಶ್ರೀಲಂಕಾ ವಿರುದ್ಧ 3 ಇನಿಂಗ್ಸ್'ನಲ್ಲಿ ಕೇವಲ 86 ರನ್ ಬಾರಿಸಿದ್ದ ರಾಹುಲ್, ಆಫ್ರಿಕಾದ ಬೌನ್ಸಿ ಪಿಚ್'ನಲ್ಲಿ ಯಾವ ರೀತಿಯ ಪ್ರದರ್ಶನ ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.