ಒಂದು ಹಂತದಲ್ಲಿ 205ರನ್'ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಟೀಂ ಇಂಡಿಯಾ ಧವನ್(109) ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಅನಿರೀಕ್ಷಿತ ಕುಸಿತ ಕಂಡಿತು. ರಹಾನೆ(8) ಪಾಂಡ್ಯ(9) ಅಯ್ಯರ್(18) ಬೇಗನೇ ವಿಕೆಟ್ ಒಪ್ಪಿಸಿದರು. ಧೋನಿ ಮಾತ್ರ ಕೊನೆವರೆಗೂ ಬ್ಯಾಟಿಂಗ್ ನಡೆಸಿ 43 ಎಸೆತಗಳಲ್ಲಿ 42 ರನ್ ಗಳಿಸಿದರು.

ಜೊಹಾನ್ಸ್'ಬರ್ಗ್(ಫೆ.10): ಶಿಖರ್ ಧವನ್ ಆಕರ್ಷಕ ಶತಕ ಹಾಗೂ ನಾಯಕ ಕೊಹ್ಲಿ ಉಪಯುಕ್ತ ಅರ್ಧಶತಕದ ನೆರವಿನಿಂದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 289 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.

Add Asianetnews Kannada as a Preferred SourcegooglePreferred

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್'ಗೆ ಧವನ್ ಹಾಗೂ ಕೊಹ್ಲಿ ಜೋಡಿ 158 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಜೋಡಿಯನ್ನು ಕ್ರಿಸ್ ಮೋರಿಸ್ ಬೇರ್ಪಡಿಸಿದರು. 75 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಕೊಹ್ಲಿಯನ್ನು ಮೋರಿಸ್ ಪೆವಿಲಿಯನ್'ಗೆ ಅಟ್ಟಿದರು. ಇನ್ನು ತಮ್ಮ ಏಕದಿನ ವೃತ್ತಿಜೀವನದ 100ನೇ ಪಂದ್ಯವಾಡುತ್ತಿರುವ ಶಿಖರ್ ಧವನ್ ಭರ್ಜರಿ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು. ಈ ಮೂಲಕ 100ನೇ ಪಂದ್ಯದಲ್ಲಿ ಶತಕ ಭಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 9ನೇ ಬ್ಯಾಟ್ಸ್'ಮನ್ ಎನ್ನುವ ಕೀರ್ತಿಗೆ ಧವನ್ ಪಾತ್ರರಾದರು.

ಕೈಕೊಟ್ಟ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 205ರನ್'ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಟೀಂ ಇಂಡಿಯಾ ಧವನ್(109) ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಅನಿರೀಕ್ಷಿತ ಕುಸಿತ ಕಂಡಿತು. ರಹಾನೆ(8) ಪಾಂಡ್ಯ(9) ಅಯ್ಯರ್(18) ಬೇಗನೇ ವಿಕೆಟ್ ಒಪ್ಪಿಸಿದರು. ಧೋನಿ ಮಾತ್ರ ಕೊನೆವರೆಗೂ ಬ್ಯಾಟಿಂಗ್ ನಡೆಸಿ 43 ಎಸೆತಗಳಲ್ಲಿ 42 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ: 289/7

ಧವನ್: 109

ಕೊಹ್ಲಿ: 75

ಎನ್ಜಿಡಿ: 52/2

(*ವಿವರ ಅಪೂರ್ವ)