Asianet Suvarna News Asianet Suvarna News

ಡಕಾರ್ ರ‍್ಯಾಲಿ 2019: ಪ್ರತಿಷ್ಠಿತ ರೇಸ್ ಆರಂಭ-ಚಾಂಪಿಯನ್ ನಿರೀಕ್ಷೆಯಲ್ಲಿ ಟಿವಿಎಸ್

ಬರೋಬ್ಬರಿ 5000 ಕಿ.ಮೀ ದೂರದ  ಪ್ರತಿಷ್ಠಿತ ಡಕಾರ್ ರ‍್ಯಾಲಿಗೆ ಚಾಲನೆ ಸಿಕ್ಕಿದೆ. ಪೆರುವಿನಲ್ಲಿ ನಡೆಯುತ್ತಿರುವ ಈ ಡಕಾರ್ ರ‍್ಯಾಲಿಯ ವಿಶೇಷತೆ ಎನು? ಇಲ್ಲಿದೆ ಸಂಪೂರ್ಣ ಮಾಹಿತಿ.

Sherco TVS Factory Rally team kick starts Dakar 2019
Author
Bengaluru, First Published Jan 7, 2019, 8:04 PM IST

ಲಿಮಾ(ಜ.07): 41 ನೇ ಡಕರ್ ರ‍್ಯಾಲಿಗೆ ಚಾಲನೆ ಸಿಕ್ಕಿದೆ. ಪೆರುವಿನ ಲಿಮಾದಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ ರ‍್ಯಾಲಿಯನ್ನ ಭಾರತ 2 ತಂಡಗಳು ಪಾಲ್ಗೊಳ್ಳುತ್ತಿದೆ. ಶೆರ್ಕೋ ಟಿವಿಎಸ್ ಫ್ಯಾಕ್ಟರಿ ಟೀಂ ಹಾಗೂ ಹೀರೋ ಮೋಟರ್‌ಸ್ಪೋರ್ಟ್ಸ್. ಶೆರ್ಕೋ ತಂಡದಲ್ಲಿ ಕನ್ನಡಿಗ ಅರವಿಂದ್ ಕೆ.ಪಿ ಪ್ರಮುಖ ಆಕರ್ಷಣೆಯಾಗಿದ್ದರೆ, ಹೀರೋ ಮೋಟರ್ ಸ್ಪೋರ್ಟ್‌ನಲ್ಲಿ ಮತ್ತೊರ್ವ ಕನ್ನಡಿಗ ಸಿಎಸ್ ಸಂತೋಷ್ ಕೇಂದ್ರ ಬಿಂದು.

Sherco TVS Factory Rally team kick starts Dakar 2019

ಇದನ್ನೂ ಓದಿ: ಜನವರಿ 8-9ರಂದು ಭಾರತ್ ಬಂದ್: ಏಕೆ? ಯಾರಿಂದ...?

ಕಳೆದ ಡಕಾರ್ ರ‍್ಯಾಲಿಯಲ್ಲಿ ಶೆರ್ಕೋ ಟಿವಿಎಸ್ ರ‍್ಯಾಲಿ ತಂಡ ಪಾಲ್ಗೊಂಡಿತ್ತು. ಈ ಬಾರಿ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಜ.06 ರಂದು ರ‍್ಯಾಲಿಗೆ ಚಾಲನೆ ದೊರಕಿದೆ.  ಕಳೆದೊಂದು ವರ್ಷದಿಂದ ಶೆರ್ಕೋ ಟಿವಿಎಸ್ ರ‍್ಯಾಲಿ ತಂಡ ಡಕಾರ್ ರ‍್ಯಾಲಿಗಾಗಿ ಅಭ್ಯಾಸ ನಡೆಸಿದೆ. ಈ ಹಿಂದಿನ ರ‍್ಯಾಲಿಗಳಲ್ಲಿ ಟಿವಿಎಸ್ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿದೆ ಎಂದು ಶೆರ್ಕೋ ಟಿವಿಎಸ್ ಫ್ಯಾಕ್ಟರಿ ಟೀಂ ಮ್ಯಾನೇಜರ್ ಡೇವಿಡ್ ಕಾಸ್ಟ್ಯೂ ಹೇಳಿದ್ದಾರೆ.

ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!

ಟಿವಿಎಸ್ ಈ ಬಾರಿ RTR 450 ರ‍್ಯಾಲಿ ಮೋಟರ್‌ಸೈಕಲ್ ರೇಸ್‌ಗಿಳಿಸಿದೆ. ಇದರ ಗರಿಷ್ಠ ವೇಗ 180 ಕಿ.ಮೀ.  10 ಹಂತಗಳಲ್ಲಿ ಒಟ್ಟು 5000 ಕಿ.ಮೀ ದೂರದ ಡಕಾರ್ ರ‍್ಯಾಲಿ ಅತ್ಯಂತ ಸವಾಲಿನ  ರ‍್ಯಾಲಿ ಎಂದೇ ಗುರುತಿಸಿಕೊಂಡಿದೆ. 

Follow Us:
Download App:
  • android
  • ios