ಇತ್ತೀಚೆಗೆ ನಡೆದಿದ್ದ ಹಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಶೀತಲ್, ಮಂಗಳವಾರ ಪ್ರಕಟಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 230 ಅಂಕಗಳನ್ನು ಸಂಪಾದಿಸಿದ್ದು, 2 ಸ್ಥಾನ ಮೇಲೇರಿ ಅಗ್ರಸ್ಥಾನ ಪಡೆದಿದ್ದಾರೆ. ಪ್ಯಾರಾ ಏಷ್ಯಾಡ್‌ನಲ್ಲಿ 3 ಚಿನ್ನ ಗೆದ್ದಿದ್ದ ರಾಕೇಶ್ ಕುಮಾರ್ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನ ಪಡೆದರೆ, ಸರಿತಾ 7 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ.

ನವದೆಹಲಿ(ನ.29): ಎರಡೂ ಕೈಗಳಿಲ್ಲದೇ ಇದ್ದರೂ ಪ್ಯಾರಾ ಆರ್ಚರಿಯಲ್ಲಿ ಸಾಧನೆ ಮಾಡುತ್ತಿರುವ ಭಾರತದ 16 ವರ್ಷದ ಶೀತಲ್ ದೇವಿ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ಹಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಶೀತಲ್, ಮಂಗಳವಾರ ಪ್ರಕಟಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 230 ಅಂಕಗಳನ್ನು ಸಂಪಾದಿಸಿದ್ದು, 2 ಸ್ಥಾನ ಮೇಲೇರಿ ಅಗ್ರಸ್ಥಾನ ಪಡೆದಿದ್ದಾರೆ. ಪ್ಯಾರಾ ಏಷ್ಯಾಡ್‌ನಲ್ಲಿ 3 ಚಿನ್ನ ಗೆದ್ದಿದ್ದ ರಾಕೇಶ್ ಕುಮಾರ್ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನ ಪಡೆದರೆ, ಸರಿತಾ 7 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ.

ಬ್ಯಾಡ್ಮಿಂಟನ್‌ ಅಂಕಣದಲ್ಲಿ ಹಕ್ಕಿ ಹಿಕ್ಕೆ, ಭಾರೀ ಧೂಳು: ಅಂ.ರಾ. ಶಟ್ಲರ್‌ಗಳ ಬೇಸರ

ಲಖನೌ: ಸಯ್ಯದ್‌ ಮೋದಿ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರ ಇಲ್ಲಿ ಆರಂಭಗೊಂಡಿದ್ದು, ಅಂಕಣ, ಕ್ರೀಡಾಂಗಣದ ಗುಣಮಟ್ಟದ ಬಗ್ಗೆ ಅಂತಾರಾಷ್ಟ್ರೀಯ ಹಾಗೂ ಭಾರತೀಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಂಗಾಪೂರದ ಜೆಸ್ಸಿಕಾ ತಾನ್‌, ಡೆನ್ಮಾರ್ಕ್‌ನ ಫ್ರೆಡೆರಿಕ್‌ ಸೋಗರ್ಡ್‌ ಸೇರಿದಂತೆ ಕೆಲ ಶಟ್ಲರ್‌ಗಳು ಅಂಕಣದಲ್ಲಿ ಹಕ್ಕಿ ಹಿಕ್ಕೆ ಹಾಕಿರುವ ಹಾಗೂ ಕ್ರೀಡಾಂಗಣದಲ್ಲಿ ಹಕ್ಕಿಗಳು ಹಾರಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕ್ರೀಡಾಂಗಣ ಧೂಳಿನಿಂದ ಆವೃತ್ತವಾಗಿದೆ ಎಂದೂ ದೂರಿದ್ದಾರೆ. 

Vijay Hazare Trophy: ಇಂದು ಕರ್ನಾಟಕ vs ಬಿಹಾರ ಫೈಟ್‌

ಅಂತಾರಾಷ್ಟ್ರೀಯ ಟೂರ್ನಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ್ದಕ್ಕೆ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆ ವಿರುದ್ಧ ಹಲವರು ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಅರ್ಹತಾ ಪಂದ್ಯಗಳು ನಡೆದಿದ್ದು, ಪ್ರಧಾನ ಸುತ್ತಿನ ಪಂದ್ಯಗಳು ಬುಧವಾರ ಆರಂಭಗೊಳ್ಳಲಿದೆ.

ಕಲಬುರಗಿ ಟೆನಿಸ್‌: ರಾಜ್ಯದ ಗಣೇಶ್‌ 2ನೇ ಸುತ್ತು ಪ್ರವೇಶ

ಕಲಬುರಗಿ: ಇಲ್ಲಿ ಆರಂಭಗೊಂಡ ಐಟಿಎಫ್ ಕಲಬುರಗಿ ಓಪನ್ ಟೆನಿಸ್‌ ಟೂರ್ನಿಯಲ್ಲಿ ಕರ್ನಾಟಕದ ಮನೀಶ್ ಗಣೇಶ್ 2ನೇ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮಂಗಳವಾರ ಗಣೇಶ್‌, ಜಪಾನಿನ ಯುಚಿರೋ ಇನುಯಿ ವಿರುದ್ಧ 6-1, 6-2 ಅಂತರದಲ್ಲಿ ಗೆಲುವು ಸಾಧಿಸಿದರು. ಆದರೆ ರಾಜ್ಯದ ಆದಿಲ್‌ ಕಲ್ಯಾಣ್‌ಪುರ ಅವರು ಆರ್ಯನ್ ಶಾ ವಿರುದ್ಧ 4-6, 3-6ರಿಂದ ಸೋತು ಹೊರಬಿದ್ದರು. 

'ಕಳೆದ ಮೂರು ವರ್ಷದಲ್ಲಿ...': RCB ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಹರ್ಷಲ್ ಪಟೇಲ್

ಇದೇ ವೇಳೆ ಡಬಲ್ಸ್‌ನಲ್ಲಿ ಆದಿಲ್ ಮತ್ತು ಸಿದ್ಧಾರ್ಥ್ ರಾವತ್ ಜೋಡಿ ಜಪಾನಿನ ಯುಚಿರೊ ಇನುಯಿ ಮತ್ತು ಕೊರಿಯಾದ ಯುನ್‍ಸಿಯೊಕ್ ಜಂಗ್ ಅವರನ್ನು 3-6, 6-4, 10-8 ಅಂತರದಲ್ಲಿ ಸೋಲಿಸಿ ಮುಂದಿನ ಸುತ್ತಿಗೇರಿದರು. ಆದರೆ ರಿಷಿ ರೆಡ್ಡಿ-ಪಾರ್ಥ್ ಅಗರ್ವಾಲ್ ಜೋಡಿ ಅಭಿಯಾನ ಕೊನೆಗೊಳಿಸಿತು.

ರಾಷ್ಟ್ರೀಯ ಹಾಕಿ: 4ನೇ ಸ್ಥಾನಕ್ಕೆ ತೃಪ್ತಿಪಟ್ಟ ರಾಜ್ಯ

ಚೆನ್ನೈ: 13ನೇ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಟೂರ್ನಿಯಲ್ಲಿ ಕರ್ನಾಟಕ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 3ನೇ ಸ್ಥಾನಕ್ಕಾಗಿ ಮಂಗಳವಾರ ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲಿ ರಾಜ್ಯ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 3-5 ಗೋಲಿನಿಂದ ಸೋಲನುಭವಿಸಿತು.

3ನೇ ಕ್ವಾರ್ಟರ್‌ನಲ್ಲಿ ಕರ್ನಾಟಕ 3-1ರಲ್ಲಿ ಮುನ್ನಡೆ ಹೊಂದಿದ್ದ ಹೊರತಾಗಿಯೂ, ಬಳಿಕ 2 ಗೋಲು ಬಾರಿಸಿದ ತಮಿಳುನಾಡು ನಿಗದಿತ ಸಮಯಕ್ಕೆ ಪಂದ್ಯದಲ್ಲಿ ಸಮಬಲ ಸಾಧಿಸಿತು. ಬಳಿಕ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. 5 ಗೋಲು ಬಾರಿಸಿದ ತಮಿಳುನಾಡು 3ನೇ ಸ್ಥಾನಿಯಾಯಿತು. ಕಳೆದೆರಡು ಆವೃತ್ತಿಗಳಲ್ಲಿ ಕರ್ನಾಟಕ 3ನೇ ಸ್ಥಾನ ಪಡೆದಿತ್ತು.

ಪಂಜಾಬ್‌ ಚಾಂಪಿಯನ್‌

ಫೈನಲ್‌ನಲ್ಲಿ ಹರ್ಯಾಣವನ್ನು ಪೆನಾಲ್ಟಿ ಶೂಟೌಟ್‌ನ ಸಡನ್‌ ಡೆತ್‌ನಲ್ಲಿ 9-8ರಿಂದ ಮಣಿಸಿದ ಪಂಜಾಬ್‌ ಚಾಂಪಿಯನ್‌ ಎನಿಸಿಕೊಂಡಿತು. ಪಂಜಾಬ್‌ 4ನೇ ಬಾರಿ ಪ್ರಶಸ್ತಿ ಎತ್ತಿಹಿಡಿದರೆ, ಸತತ 2ನೇ ಹಾಗೂ ಒಟ್ಟಾರೆ 3ನೇ ಬಾರಿ ಚಾಂಪಿಯನ್‌ ಆಗುವ ಹರ್ಯಾಣ ಕನಸು ಭಗ್ನಗೊಂಡಿತು.