Vijay Hazare Trophy: ಇಂದು ಕರ್ನಾಟಕ vs ಬಿಹಾರ ಫೈಟ್‌

ಕಳೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ವಿರುದ್ಧ ಲಭಿಸಿದ 6 ವಿಕೆಟ್‌ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಮತ್ತೊಂದು ಜಯದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿಯುವ ತವಕದಲ್ಲಿದೆ. ಅತ್ತ ಬಿಹಾರ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದ್ದು, ಮತ್ತೊಂದು ಪಂದ್ಯ ರದ್ದಾಗಿದೆ. ಕೇವಲ 2 ಅಂಕ ಸಂಪಾದಿಸಿರುವ ಬಿಹಾರ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Vijay Hazare Trophy Karnataka take on Bihar challenge in Ahmedabad kvn

ಅಹಮದಾಬಾದ್‌(ನ.29): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಸತತ 4ನೇ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ, ಬುಧವಾರ ಬಿಹಾರ ವಿರುದ್ಧ ಸೆಣಸಲಿದೆ. ‘ಸಿ’ ಗುಂಪಿನಲ್ಲಿರುವ ರಾಜ್ಯ ತಂಡ ಟೂರ್ನಿಯಲ್ಲಿ 3 ಪಂದ್ಯಗಳನ್ನಾಡಿದ್ದು, ಹ್ಯಾಟ್ರಿಕ್‌ ಜಯದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. 

ಕಳೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ವಿರುದ್ಧ ಲಭಿಸಿದ 6 ವಿಕೆಟ್‌ ಗೆಲುವು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದ್ದು, ಮತ್ತೊಂದು ಜಯದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿಯುವ ತವಕದಲ್ಲಿದೆ. ಅತ್ತ ಬಿಹಾರ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದ್ದು, ಮತ್ತೊಂದು ಪಂದ್ಯ ರದ್ದಾಗಿದೆ. ಕೇವಲ 2 ಅಂಕ ಸಂಪಾದಿಸಿರುವ ಬಿಹಾರ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಕರ್ನಾಟಕಕ್ಕೆ ಆಘಾತ ನೀಡಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ.

'ಕಳೆದ ಮೂರು ವರ್ಷದಲ್ಲಿ...': RCB ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಹರ್ಷಲ್ ಪಟೇಲ್

ಪಂದ್ಯ: ಬೆಳಗ್ಗೆ 9ಕ್ಕೆ

ಕಿವೀಸ್‌ ಟೆಸ್ಟ್‌: ಮೊದಲ ದಿನ ಬಾಂಗ್ಲಾದೇಶ 310/9

ಸೈಲೆಟ್(ಬಾಂಗ್ಲಾದೇಶ): ನ್ಯೂಜಿಲೆಂಡ್‌ ವಿರುದ್ಧದ ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆಹಾಕಿದೆ. ಮೊದಲ ದಿನದಂತ್ಯಕ್ಕೆ ಆತಿಥೇಯ ತಂಡ 85 ಓವರ್‌ಗಳಲ್ಲಿ 9 ವಿಕೆಟ್‌ಗೆ 310 ರನ್‌ ಗಳಿಸಿದೆ. ಆರಂಭಿಕ ಬ್ಯಾಟರ್‌ ಮಹ್ಮೂದುಲ್‌ ಹಸನ್‌ 86 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. 180 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾ, ಬಳಿಕ ದಿಢೀರ್‌ ಕುಸಿತ ಕಂಡಿತು. ನಜ್ಮುಲ್ 37, ಮೋಮಿನುಲ್‌ ಹಕ್‌ 37 ರನ್‌ ಸಿಡಿಸಿದರು. ಗ್ಲೆನ್‌ ಫಿಲಿಪ್ಸ್‌ 53ಕ್ಕೆ 4, ಜೇಮಿಸನ್‌ ಹಾಗೂ ಏಜಾಜ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರು.

ವಿಶ್ವಕಪ್ ಫೈನಲ್‌ನಲ್ಲಿ ಕೊಹ್ಲಿ ಔಟ್ ಮಾಡಿದ್ದು ಸಾಯುವ ಕೊನೆಯ ಕ್ಷಣದವರೆಗೂ ನೆನಪಿರುತ್ತೆ: ಪ್ಯಾಟ್ ಕಮಿನ್ಸ್‌

ಇಂದು ಭಾರತ-ಇಂಗ್ಲೆಂಡ್‌ ಮೊದಲ ಮಹಿಳಾ ಟಿ20

ಮುಂಬೈ: ಭಾರತ ‘ಎ’ ಹಾಗೂ ಇಂಗ್ಲೆಂಡ್‌ ‘ಎ’ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಬುಧವಾರ ಆರಂಭಗೊಳ್ಳಲಿದ್ದು, ಆತಿಥೇಯ ತಂಡ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಸರಣಿಯ 3 ಪಂದ್ಯಗಳಿಗೂ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಭಾರತ ತಂಡವನ್ನು ಕೇರಳದ ಮಿನ್ನು ಮಾನಿ ಮುನ್ನಡೆಸಲಿದ್ದು, ಶ್ರೇಯಾಂಕ ಪಾಟೀಲ್‌ ಸೇರಿ ಕರ್ನಾಟಕದ ನಾಲ್ವರು ತಂಡದಲ್ಲಿದ್ದಾರೆ. ಸರಣಿಯ 2ನೇ ಹಾಗೂ 3ನೇ ಪಂದ್ಯ ಕ್ರಮವಾಗಿ ಡಿ.1 ಮತ್ತು 3ರಂದು ನಿಗದಿಯಾಗಿವೆ.
 

Latest Videos
Follow Us:
Download App:
  • android
  • ios