ರವಿಶಾಸ್ತ್ರಿಯ ಮತ್ತೊಂದು ವರಸೆ ಶುರು
ನವದೆಹಲಿ(ಜು.19): ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತೊಂದು ವರಸೆ ಶುರು ಮಾಡಿದ್ದಾರೆ. ತಮಗೆ ಬೇಕದ ಬೌಲಿಂಗ್'ಗೆ ಭರತ್ ಅರುಣ್ ಹಾಗೂ ಸಹಾಯಕ ಕೋಚ್ ಸಂಜಯ್ ಬಂಗಾರ್ ಅವರನ್ನು ನೇಮಿಸಿದ ನಂತರ ಈಗ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಬ್ಯಾಟಿಂಗ್ ಸಲಹೆಗಾರರನ್ನಾಗಿ ನೇಮಿಸಬೇಕೆಂದು ಬಿಸಿಸಿಐಗೆ ಪ್ರಸ್ತಾವವಿಟ್ಟಿದ್ದರು.
ಸಚಿನ್ ಪ್ರಸ್ತುತ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಹಾಗೂ ಮುಂಬೈ ಇಂಡಿಯನ್ಸ್ ಜೊತೆಗೂ ಗುರುತಿಸಿಕೊಂಡಿದ್ದಾರೆ. ಸ್ವಹಿತಾಸಕ್ತಿ ಆರೋಪ ಎದುರಾಗಲಿದೆ ಎನ್ನುವ ಕಾರಣ ಸಚಿನ್'ರನ್ನು ಬ್ಯಾಟಿಂಗ್ ಸಲಹೆಗಾರನಾಗಿ ನೇಮಿಸುವುದು ಕಷ್ಟ ಎಂದು ಬಿಸಿಸಿಐ ಶಾಸ್ತ್ರಿಗೆ ತಿಳಿಸಿದೆ ಎನ್ನಲಾಗಿದೆ.
