ಇದೇ ರೀತಿ ಪೂಜಾರ ಹಾಗೂ ಕೊಹ್ಲಿ ಸಹ ನಿಗದಿತ ಸಮಯಕ್ಕಿಂತ ಮೊದಲೇ ಕ್ರೀಡಾಂಗಣಕ್ಕೆ ಆಗಮಿಸಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು ಎನ್ನುವ ವಿಷಯ ತಿಳಿದುಬಂದಿದೆ.
ಕೊಲಂಬೊ(ಆ.01): ಭಾರತ ತಂಡದ ನೂತನ ಕೋಚ್ ರವಿಶಾಸ್ತ್ರಿ, ತಂಡದ ಅಭ್ಯಾಸ ಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ಗೂ ಮುನ್ನ ಅವರು ನೂತನ ಅಭ್ಯಾಸ ಶೈಲಿಯನ್ನು ಪರಿಚಯಿಸಿದರು. ತಂಡ ಒಂದೊಮ್ಮೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಆರಂಭಿಕರಿಬ್ಬರನ್ನೂ ಉಳಿದ ಆಟಗಾರರಿಗಿಂತ ಮೊದಲೇ ಮೈದಾನಕ್ಕೆ ಕರೆಸಿದ್ದರು. ಧವನ್ ಹಾಗೂ ಮುಕುಂದ್ ಮೈದಾನಕ್ಕಿಳಿಯುವ ಮುನ್ನ ಕೆಲ ಕಾಲ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿ, ಸಿದ್ಧತೆ ನಡೆಸಿದರು. ಇದೇ ರೀತಿ ಪೂಜಾರ ಹಾಗೂ ಕೊಹ್ಲಿ ಸಹ ನಿಗದಿತ ಸಮಯಕ್ಕಿಂತ ಮೊದಲೇ ಕ್ರೀಡಾಂಗಣಕ್ಕೆ ಆಗಮಿಸಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು ಎನ್ನುವ ವಿಷಯ ತಿಳಿದುಬಂದಿದೆ.
