ಬುಮ್ರಾ ಬದಲಿಗೆ ಟೀಂ ಇಂಡಿಯಾ ಕೂಡಿಕೊಂಡ ಮುಂಬೈ ವೇಗಿ..!

Shardul Thakur to replace Jasprit Bumrah in India's ODI squad against England
Highlights

ಬುಮ್ರಾ ಡುಬ್ಲಿನ್’ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಎಡಗಾಲಿನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿದಿದ್ದರು. 

ನವದೆಹಲಿ[ಜು.06]: ಗಾಯದಿಂದ ತಂಡದಿಂದ ಹೊರಬಿದ್ದಿರುವ ಜಸ್’ಪ್ರೀತ್ ಬುಮ್ರಾ ಬದಲಿಗೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಕೂಡಿಕೊಂಡಿದ್ದಾರೆ. 

ಬುಮ್ರಾ ಡುಬ್ಲಿನ್’ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಎಡಗಾಲಿನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿದಿದ್ದರು. ಬುಮ್ರಾ ಜುಲೈ 4ರಂದು ಲೀಡ್ಸ್’ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬುಮ್ರಾ, ಆ ಬಳಿಕ ತವರಿಗೆ ಮರಳಿದ್ದರು. ಇದೀಗ ಮತ್ತೋರ್ವ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಾಡಿದ ಬಳಿಕ 3 ಏಕದಿನ ಪಂದ್ಯಗಳ ಸರಣಿಯಾಡಲಿದೆ. ಜುಲೈ 12ರಿಂದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ.

ಇದನ್ನು ಓದಿ: 2ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ

ಶಾರ್ದೂಲ್ ಠಾಕೂರ್ ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್’ನಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆಡಿದ 13 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ಗಮನ ಸೆಳೆದಿದ್ದರು.

ಭಾರತ ತಂಡ ಹೀಗಿದೆ:
ಕೊಹ್ಲಿ[ನಾಯಕ], ಧವನ್, ರೋಹಿತ್, ರಾಹುಲ್, ಶ್ರೇಯಸ್, ರೈನಾ, ಧೋನಿ[ವಿಕೆಟ್ ಕೀಪರ್], ಕಾರ್ತಿಕ್, ಚಾಹಲ್, ಕುಲ್ದೀಪ್, ಅಕ್ಷರ್ ಪಟೇಲ್, ಭುವನೇಶ್ವರ್, ಶಾರ್ದೂಲ್, ಹಾರ್ದಿಕ್ ಪಾಂಡ್ಯ, ಸಿದ್ದಾರ್ಥ್ ಕೌಲ್, ಉಮೇಶ್ ಯಾದವ್.    

loader