ಐಪಿಎಲ್’ನಿಂದ ಶಮಿಯನ್ನು ದೂರವಿರಿಸಿ: ಡೆಲ್ಲಿ ತಂಡಕ್ಕೆ ಶಮಿ ಪತ್ನಿ ಮನವಿ

First Published 2, Apr 2018, 11:33 AM IST
Shami Wife Request to do not allow Shami to IPL
Highlights

ಟೀಂ ಇಂಡಿಯಾ ವೇಗಿ ಮೊಹಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್, ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸಿಇಒ ಹೇಮಂತ್ ದುವಾರನ್ನು  ಭೇಟಿ ಮಾಡಿ ಐಪಿಎಲ್‌ನಿಂದ ತಮ್ಮ ಪತಿಯನ್ನು ದೂರವಿರಿಸುವಂತೆ  ಮನವಿ ಮಾಡಿದ್ದಾರೆ ಎಂದು ತಿಳಿದು  ಬಂದಿದೆ.

ಮುಂಬೈ (ಏ. 02): ಟೀಂ ಇಂಡಿಯಾ ವೇಗಿ ಮೊಹಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್, ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸಿಇಒ ಹೇಮಂತ್ ದುವಾರನ್ನು  ಭೇಟಿ ಮಾಡಿ ಐಪಿಎಲ್‌ನಿಂದ ತಮ್ಮ ಪತಿಯನ್ನು ದೂರವಿರಿಸುವಂತೆ  ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ ಹೇಮಂತ್‌ರನ್ನು ಭೇಟಿ ಮಾಡಿದ ಹಸೀನ್, ‘ಪ್ರಸ್ತುತ ಕುಟುಂಬದಲ್ಲಿ  ಉಂಟಾಗಿರುವ ಸಮಸ್ಯೆಗಳು ಬಗೆಹರಿಯುವ  ತನಕ ಶಮಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಮಾಡಿಕೊಡದಂತೆ’ ಕೇಳಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಶುಕ್ರವಾರ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ. ಕೆ.ಖನ್ನಾರನ್ನು ಭೇಟಿ ಮಾಡಿದ್ದ ಹಸೀನ್ ನೆರವು ಕೋರಿದ್ದರು. ಆದರೆ, ಅವರಿಂದ ಸೂಕ್ತ ಪ್ರತಿಕ್ರಿಯೆ ದೊರೆಯದ ಕಾರಣ ಡೆಲ್ಲಿ ತಂಡವನ್ನು ಎಡತಾಕಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಶಮಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಹೊರೆಸಿದ್ದ ಹಸೀನ್, ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಜತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ದೂರಿದ್ದರು. ಇದರ ಮಧ್ಯೆಯೇ ಶಮಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. 

loader