ವಿರಾಟ್ ಕೊಹ್ಲಿ ಜೆರ್ಸಿ ಮೇಲೆ ಭಾರತ ತಂಡದ ಆಟಗಾರರ ಹಸ್ತಾಕ್ಷರದ ಜತೆ ವಿಶೇಷ ಸಂದೇಶ ಬರೆದಿದ್ದ ಉಡುಗೊರೆಯನ್ನು ನೀಡಿದ ಸಂಗತಿ ಕೆಲ ದಿನಗಳ ಹಿಂದಷ್ಟೇ ಬಹಿರಂಗವಾಗಿತ್ತು.

ಕರಾಚಿ(ಏ.21): ತನ್ನ ಕ್ರಿಕೆಟ್ ನಿವೃತ್ತಿಗಾಗಿ ನಂಬಲಸಾಧ್ಯ ರೀತಿಯಲ್ಲಿ ಬೀಳ್ಕೊಡುಗೆ ಉಡುಗೊರೆ ನೀಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ತಂಡಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಧನ್ಯವಾದ ಹೇಳಿದ್ದಾರೆ

‘‘ನಿಮಗೂ ಹಾಗೂ ಇಡೀ ಭಾರತ ತಂಡಕ್ಕೂ ಧನ್ಯವಾದಗಳು. ನಿಜವಾದ ಸೂಪರ್‌'ಸ್ಟಾರ್ ನೀವು. ಆದಷ್ಟು ಬೇಗ ಭೇಟಿಯಾಗೋಣ’’ ಎಂದು ಅಫ್ರಿದಿ ಸಾಮಾಜಿಕ ಜಾಲತಾಣ ಟ್ವಿಟರ್‌'ನಲ್ಲಿ ಟ್ವೀಟಿಸಿದ್ದಾರೆ.

ಅಫ್ರಿದಿಗೆ ಕೊಹ್ಲಿ ಜೆರ್ಸಿ ನೀಡಿ ಗೌರವಿಸಿದ ಟೀಂ ಇಂಡಿಯಾ!

ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌'ಗೆ ವಿದಾಯ ಘೋಷಿಸಿದ ಅಫ್ರಿದಿಗೆ, ವಿರಾಟ್ ಕೊಹ್ಲಿ ಜೆರ್ಸಿ ಮೇಲೆ ಭಾರತ ತಂಡದ ಆಟಗಾರರ ಹಸ್ತಾಕ್ಷರದ ಜತೆ ವಿಶೇಷ ಸಂದೇಶ ಬರೆದಿದ್ದ ಉಡುಗೊರೆಯನ್ನು ನೀಡಿದ ಸಂಗತಿ ಕೆಲ ದಿನಗಳ ಹಿಂದಷ್ಟೇ ಬಹಿರಂಗವಾಗಿತ್ತು. ಮತ್ತು ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.