ಟೀಂ ಇಂಡಿಯಾ ಜೊತೆಗಿನ ತಮ್ಮ ಬಾಂಧ್ಯವ ಕುರಿತು ಮಾತನಾಡಿರುವ ಅವರು, ಹರ್ಭಜನ್, ಯುವರಾಜ್ ಹಾಗೂ ಜಹೀರ್‌'ಖಾನ್ ಜೊತೆಗೆ ಉತ್ತಮ ಒಡನಾಟವಿರುವುದಾಗಿ ಹೇಳಿದ್ದಾರೆ.
ಬೆಂಗಳೂರು(ಮೇ.04): ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಅವರಿಗೆ ನನ್ನ ಮೇಲಿರುವ ಕೋಪ ಇನ್ನೂ ತಣ್ಣಗಾಗಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.
‘‘ಕೆಲ ವರ್ಷಗಳ ಹಿಂದೆ ಮೈದಾನದಲ್ಲಿ ನನ್ನ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಬಳಿಕ ಆ ಮನಸ್ತಾಪ ಹಾಗೇ ಉಳಿದು ಬಿಟ್ಟಿದೆ. ಘಟನೆ ನಡೆದು ಸಾಕಷ್ಟು ವರ್ಷಗಳೇ ಕಳೆದರೂ ಗಂಭೀರ್'ಗೆ ನನ್ನ ಮೇಲಿನ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ’’ ಎಂದು ಅಫ್ರಿದಿ ಹೇಳಿದ್ದಾರೆ.
ಟೀಂ ಇಂಡಿಯಾ ಜೊತೆಗಿನ ತಮ್ಮ ಬಾಂಧ್ಯವ ಕುರಿತು ಮಾತನಾಡಿರುವ ಅವರು, ಹರ್ಭಜನ್, ಯುವರಾಜ್ ಹಾಗೂ ಜಹೀರ್'ಖಾನ್ ಜೊತೆಗೆ ಉತ್ತಮ ಒಡನಾಟವಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿರುವುದು ಕುತೂಹಲ ಕೆರಳಿಸಿದೆ ಎಂದು ಅಫ್ರಿದಿ ಹೇಳಿದ್ದಾರೆ.
2007ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾನ್ಪುರದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುವ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ಗೌತಮ್ ಗಂಭೀರ್ ಹಾಗೂ ಶಾಹಿದ್ ಅಫ್ರಿದಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಪರಿಸ್ಥಿತಿ ಕಾವೇರುತ್ತಿದ್ದಂತೆ ಅಂಪೈರ್'ಗಳು ಅವರಿಬ್ಬರನ್ನು ಸಮಾಧಾನಪಡಿಸಿದ್ದರು.

