ನವೆಂಬರ್‌'ನಲ್ಲಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಡಿಸೆಂಬರ್‌ 16ರಂದು ಫೈನಲ್‌ ಪಂದ್ಯ ನಡೆಯಲಿದೆ.

ನವದೆಹಲಿ(ಜೂ.20): ಇಂಡಿಯನ್ ಪ್ರೀಮಿಯರ್‌ ಲೀಗ್‌'ನ ಕೋಲ್ಕತಾ ನೈಟ್'ರೈಡರ್ಸ್ ತಂಡದ ಒಡೆಯ ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಾಗೂ ಜಿಎಂಆರ್‌ ಸಂಸ್ಥೆ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ ಟಿ20 ಗ್ಲೋಬಲ್‌ ಲೀಗ್‌ನಲ್ಲಿ ತಂಡ ಖರೀದಿಸಿದ್ದಾರೆ.

Add Asianetnews Kannada as a Preferred SourcegooglePreferred

ಐಪಿಎಲ್'ನಲ್ಲಿ ಜಿಎಂಆರ್‌ ಸಂಸ್ಥೆ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಮಾಲೀಕತ್ವ ಹೊಂದಿದೆ. ಕಿಂಗ್ ಖಾನ್ ಕೇಪ್‌'ಟೌನ್‌ ಮೂಲದ ತಂಡವನ್ನು ಖರೀದಿ ಮಾಡಿದ್ದು, ತಂಡಕ್ಕೆ ಕೇಪ್‌ಟೌನ್‌ ನೈಟ್‌ರೈಡ​ರ್‍ಸ್ ಎಂದು ಹೆಸರಿಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ತಂಡದ ಜನಪ್ರಿಯ ಆಲ್ರೌಂಡರ್‌ ಜೆ.ಪಿ.ಡುಮಿನಿ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಇದೇ ವೇಳೆ ಜಿಎಂಆರ್‌ ಸಂಸ್ಥೆ ಜೋಹನ್ಸ್‌ಬರ್ಗ್‌ ಮೂಲದ ತಂಡವನ್ನು ಖರೀದಿ ಮಾಡಿದ್ದು, ದಕ್ಷಿಣ ಆಫ್ರಿಕಾ ತಂಡದ ಯುವ ವೇಗಿ ಕಗಿಸೊ ರಬಾಡ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಆಗಸ್ಟ್‌ 19ರಂದು ಆಟಗಾರರು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 10 ದೇಶಗಳ 400ಕ್ಕೂ ಹೆಚ್ಚು ಆಟಗಾರರು ಪಂದ್ಯಾವಳಿಯಲ್ಲಿ ಆಡಲು ಆಸಕ್ತಿ ತೋರಿದ್ದಾರೆ.

ನವೆಂಬರ್‌'ನಲ್ಲಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಡಿಸೆಂಬರ್‌ 16ರಂದು ಫೈನಲ್‌ ಪಂದ್ಯ ನಡೆಯಲಿದೆ.