ಸ್ಯಾನ್ ಜೋಸ್ (ಕ್ಯಾಲಿಫೋರ್ನಿಯಾ): 23 ಟೆನಿಸ್ ಗ್ರ್ಯಾಂಡ್‌ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್ ತಮ್ಮ ವೃತ್ತಿ ಬದುಕಿನ ಹೀನಾಯ ಸೋಲಿಗೆ ಶರಣಾಗಿದ್ದಾರೆ.

ಇಲ್ಲಿ ಮಂಗಳವಾರ ರಾತ್ರಿ ನಡೆದ ಸಿಲಿಕಾನ್ ವ್ಯಾಲಿ ಕ್ಲಾಸಿಕ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ, ಬ್ರಿಟನ್‌ನ ಜೋಹಾನ ಕೋಂಟಾ ವಿರುದ್ಧ 1-6, 0-6 ನೇರ ಸೆಟ್‌ಗಳಲ್ಲಿ ಸೋಲುಂಡರು. ಸೆರೆನಾ ಪಂದ್ಯವೊಂದರಲ್ಲಿ ಕೇವಲ 1 ಗೇಮ್ ಮಾತ್ರ ಗೆದ್ದಿದ್ದು ಇದೇ ಮೊದಲ ಬಾರಿ.

2014ರ ಡಬ್ಲ್ಯೂಟಿಎ ಫೈನಲ್ಸ್‌ನಲ್ಲಿ ಸಿಮೋನಾ ಹಾಲೆಪ್ ವಿರುದ್ಧ 0-6, 2-6 ಸೆಟ್‌ಗಳಲ್ಲಿ ಸೋತಿದ್ದು, ಈ ಮೊದಲು ಸೆರೆನಾರ ಹೀನಾಯ ಸೋಲಾಗಿತ್ತು.