ಸೆರೆನಾಗೆ ಮುಂದಿನ ತಿಂಗಳು ಹೆರಿಗೆಯಾಗುವ ನಿರೀಕ್ಷೆಯಿದೆ. ಕಳೆದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಸೆರೆನಾ, ಆಗಲೇ ಗರ್ಭವತಿಯಾಗಿದ್ದರು.
ಲಾಸ್ ಏಂಜಲೀಸ್(ಆ.17): ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮುಂಬರುವ ಆಸ್ಟ್ರೇಲಿಯಾ ಓಪನ್ ಆಡಲು ಸಿದ್ದರಿರುವುದಾಗಿ ಹೇಳಿದ್ದಾರೆ.
ಗರ್ಭಧಾರಣೆಯಿಂದ ಇನ್ನಷ್ಟು ಶಕ್ತಿ ಲಭಿಸಿದಂತೆ ಆಗುತ್ತಿದೆ. ಮುಂಬರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವುದು ಹೇಗೆ ಎನ್ನುವುದರ ಕುರಿತು ಮಾನಸಿಕ ಸಿದ್ದತೆ ನಡೆಸುತ್ತಿದ್ದೇನೆ ಎಂದು ಸೆರೆನಾ ತಿಳಿಸಿದ್ದಾರೆ. ಟೂರ್ನಿಯ ಆರಂಭದ ವೇಳೆಗೆ ಮಗುವಿಗೆ ಮೂರು ತಿಂಗಳು ತುಂಬಿರುತ್ತದೆ. ಆ ವೇಳೆಗಾಗಲೇ ಟೆನಿಸ್ ಅಂಗಳಕ್ಕೆ ಮರಳುವ ಯೋಚನೆಯಲ್ಲಿದ್ದೇನೆ, ನನ್ನ ಯೋಜನೆ ಅತಿರೇಕ ಎನಿಸಬಹುದು ಎಂದು ಈ ಬಗ್ಗೆ ಸೆರೆನಾ ಪ್ರತಿಕ್ರಿಯಿಸಿದ್ದಾರೆ.
ಸೆರೆನಾಗೆ ಮುಂದಿನ ತಿಂಗಳು ಹೆರಿಗೆಯಾಗುವ ನಿರೀಕ್ಷೆಯಿದೆ. ಕಳೆದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಸೆರೆನಾ, ಆಗಲೇ ಗರ್ಭವತಿಯಾಗಿದ್ದರು. ಅದು ಅವರ 23ನೇ ಗ್ರ್ಯಾಂಡ್'ಸ್ಲಾಂ ಆಗಿತ್ತು.
