ಫ್ರೆಂಚ್ ಓಪನ್’ನಲ್ಲಿ ಸೆರೆನಾಗಿಲ್ಲ ಶ್ರೇಯಾಂಕ..!
ಟೆನಿಸ್’ನಿಂದ ಹೊರಗುಳಿವ ಮುನ್ನ ನಂ.01 ಶ್ರೇಯಾಂಕಿತೆಯಾಗಿದ್ದ ಸೆರೆನಾ, ಇದೀಗ ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ಒಂದು ವರ್ಷದ ಬಳಿಕ 453ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ.
ಪ್ಯಾರಿಸ್[ಮೇ.23]: ವಿಶ್ವ ಮಾಜಿ ನಂ.1 ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಫ್ರೆಂಚ್ ಓಪನ್‌ನಲ್ಲಿ ಶ್ರೇಯಾಂಕ ನೀಡಲು ಆಯೋಜಕರು ನಿರಾಕರಿಸಿದ್ದಾರೆ. 3 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಆಡುತ್ತಿದ್ದಾರೆ.
ಇಂಡಿಯಾನ ವೆಲ್ಸ್ ಮತ್ತು ಮಿಯಾಮಿ ಓಪನ್‌ನಲ್ಲಿ ಸೆರೆನಾ ಆರಂಭಿಕ ಸುತ್ತುಗಳಲ್ಲಿ ನಿರ್ಗಮಿಸಿದ್ದರು. 36 ವರ್ಷ ವಯಸ್ಸಿನ ಸೆರೆನಾ ಇತ್ತೀಚೆಗಷ್ಟೇ ಮ್ಯಾಡ್ರಿಡ್ ಮತ್ತು ರೋಮ್ ಕ್ಲೇ ಕೋರ್ಟ್ ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಹೀಗಾಗಿ ಆಯೋಜಕರು ಅವರಿಗೆ ಶ್ರೇಯಾಂಕ ನೀಡದಿರಲು ನಿರ್ಧರಿಸಿದ್ದಾರೆ.
ಟೆನಿಸ್’ನಿಂದ ಹೊರಗುಳಿವ ಮುನ್ನ ನಂ.01 ಶ್ರೇಯಾಂಕಿತೆಯಾಗಿದ್ದ ಸೆರೆನಾ, ಇದೀಗ ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ಒಂದು ವರ್ಷದ ಬಳಿಕ 453ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ. ಮೇ 27 ರಿಂದ ಜೂನ್ 10 ರವರೆಗೆ ಫ್ರೆಂಚ್ ಓಪನ್ ನಡೆಯಲಿದೆ.