ಫ್ರೆಂಚ್ ಓಪನ್‌ನಲ್ಲಿ ಶುಭಾರಂಭ ಮಾಡಿದ ಸೆರೆನಾ

Serena Williams good start in French Open
Highlights

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೇರಿಕಾದ ಸೆರೆನಾ ವಿಲಿಯಮ್ಸ್ ಮೊದಲ ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಸೆರೆನಾ ಶುಭಾರಂಭ ಮಾಡಿದ್ದಾರೆ.

ಪ್ಯಾರಿಸ್: ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂನಲ್ಲಿ ಆಡುತ್ತಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಚೆಕ್ ಗಣರಾಜ್ಯದ ಕ್ರಿಸ್ಟಿನಾ ಪ್ಲಿಸ್ಕೊವಾ ವಿರುದ್ಧ 7-6, 6-4  ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ವಿಶ್ವ ನಂ.1 ರಾಫೆಲ್ ನಡಾಲ್ ಇಟಲಿಯ ಸಿಮೊನ್ ವಿರುದ್ಧ 6-4, 6-2, 7-6 ರಲ್ಲಿ ಗೆದ್ದರು. ಸೋಮವಾರ ಆರಂಭಗೊಂಡಿದ್ದ ಪಂದ್ಯ 3 ನೇ ಸೆಟ್ ಚಾಲ್ತಿಯಲ್ಲಿದ್ದಾಗ ಮಳೆಯಿಂದಾಗಿ ರದ್ದಾಗಿತ್ತು.

ಭಾಂಬ್ರಿಗೆ ಸೋಲು, ಬೋಪಣ್ಣ ಜೋಡಿಗೆ ಜಯ: ಭಾರತದ ಯೂಕಿ ಭಾಂಬ್ರಿ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಸೋಲುಂಡರು. ಬೆಲ್ಜಿಯಂನ ಬೆಮೆಲ್ಮನ್ಸ್ ವಿರುದ್ಧ 4-6, 4-6, 1-6 ಸೆಟ್ಗಳಲ್ಲಿ ಪರಾಭವಗೊಂಡು ಹೊರಬಿದ್ದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಫ್ರಾನ್ಸ್‌ನ ರೋಜರ್ ವ್ಯಾಸಲಿನ್ ಜೋಡಿ ಗೆಲುವಿನ ಆರಂಭ ಪಡೆದು 2ನೇ ಸುತ್ತಿಗೇರಿತು. 

loader