Asianet Suvarna News Asianet Suvarna News

ಫಿಫಾ ವಿಶ್ವಕಪ್ 2018: ಜಪಾನ್-ಸೆನೆಗಲ್ ಪಂದ್ಯ ಡ್ರಾನಲ್ಲಿ ಅಂತ್ಯ

ಫಿಫಾ ವಿಶ್ವಕಪ್ ಟೂರ್ನಿ ಇದೀಗ ರೋಚಕ ಘಟ್ಟ ತಲುಪಿದೆ. ಜಪಾನ್ ಹಾಗೂ ಸೆನೆಗಲ್ ನಡುವಿನ ಪಂದ್ಯ ಡ್ರಾಗೊಳ್ಳೋ ಮೂಲಕ ಉಭಯ ತಂಡದ ನಕೌಟ್ ಕನಸು ಇನ್ನೂ ಜೀವಂತವಾಗಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Senegal and Japan keep World Cup knockout hopes alive with 2-2 draw

ರಷ್ಯಾ(ಜೂ.24): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಜಪಾನ್ ಹಾಗೂ ಸೆನೆಗಲ್ ನಡುವಿನ ಪಂದ್ಯ 2-2 ಅಂತರದಲ್ಲಿ ಡ್ರಾಗೊಂಡಿದೆ. ಈ ಮೂಲಕ ಉಭಯ ತಂಡದ ನಾಕೌಟ್ ಕನಸು ಇನ್ನೂ ಜೀವಂತವಾಗಿದೆ.

ಮೊದಲಾರ್ಧದ ಆರಂಭದಲ್ಲಿ ಸೆನೆಗಲ್ ಪಂದ್ಯದ ಮೇಲೆ ಹೆಚ್ಚು ಪ್ರಾಬಲ್ಯ ಸಾಧಿಸಿತು. 11ನೇ ನಿಮಿಷದಲ್ಲಿ ಸಡಿಯೋ ಮಾನೆ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಜಪಾನ್ 34ನೇ ನಿಮಿಷದಲ್ಲಿ ತಕಾಷಿ ಇನುಯಿ ಗೋಲು ಬಾರಿಸೋ ಮೂಲಕ ಸಮಭಲ ತಂದುಕೊಟ್ಟರು. ಈ ಮೂಲಕ ಫಸ್ಟ್ ಹಾಫ್ 1-1 ಗೋಲುಗಳ ಅಂತರದಲ್ಲಿ ಸಮಭಲಗೊಂಡಿತು.

ದ್ವಿತೀಯಾರ್ಧದಲ್ಲಿ ಮತ್ತೆ ಆರ್ಭಟಿಸಿದ ಸೆನೆಗಲ್ 71ನೇ ನಿಮಿಷದಲ್ಲಿ ಮೌಸಾ ವ್ಯಾಗ್ಯೂ ಗೋಲು ಬಾರಿಸೋ ಮೂಲಕ 2-1 ಅಂತರದ ಮುನ್ನಡೆ ಪಡೆದುಕೊಂಡಿತು. ಅಷ್ಟರಲ್ಲೇ ಜಪಾನ್ ಕೆಸುಕೆ ಹೊಂಡಾ ಗೋಲು ಬಾರಿಸಿ 2-2 ಅಂತರದಲ್ಲಿ ಸಮಭಲಗೊಳಿಸಿದರು. ದ್ವಿತಿಯಾರ್ಧದ ಅಂತ್ಯದಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ಹೋರಾಟ ಮಾಡಿತು. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ಜಪಾನ್ ಹಾಗೂ ಸೆನೆಗಲ್ ನಾಕೌಟ್ ಹಂತದ ಕನಸು ಜೀವಂತವಾಗಿದೆ.

Follow Us:
Download App:
  • android
  • ios