ಇದರಿಂದ ಸಖತ್ ಖುಷಿಗೊಂಡಿರುವ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರತ ತಂಡಕ್ಕೆ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.  

ಮುಂಬೈ(ಅ.23): ಅಹಮದಬಾದ್​ನಲ್ಲಿ ನಡೆದ ಕಬಡ್ಡಿ ವಿಶ್ವಕಪ್ ಫೈನಲ್​ನಲ್ಲಿ ಇರಾನ್​​ ವಿರುದ್ಧ ಭಾರತ ತಂಡ 38-29 ಅಂಕಗಳಿಂದ ಭರ್ಜರಿ ಜಯ ದಾಖಲಿಸಿತು. 

ಇದರಿಂದ ಸಖತ್ ಖುಷಿಗೊಂಡಿರುವ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರತ ತಂಡಕ್ಕೆ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಟ್ವೀಟರ್ ನಲ್ಲಿ ಟೀಮ್ ಇಂಡಿಯಾಕ್ಕೆ ಶುಭಾಷಯ ಕೋರಿರುವ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಇದರ ಜೊತೆಯಲ್ಲಿ ಆಂಗ್ಲರ ಕಾಲು ಎಳೆದಿದ್ದಾರೆ. 

ಭಾರತಕಬಡ್ಡಿ ಯನ್ನು ಹುಟ್ಟಿ ಹಾಕಿತು, ಅಲ್ಲದೇ 8 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆದರೆ ಕ್ರಿಕೆಟ್ ಹುಟ್ಟುಹಾಕಿದವರು ಒಂದೂ ಕಪ್ ಗೆಲ್ಲಲಾಗದೆ ಇನ್ನು ಬರವಣಿಗೆಯಲ್ಲಿನ ತಪ್ಪುಗಳನ್ನೇ ಹುಡುಕುತ್ತಿದ್ದಾರೆ ಎಂದು ಕುಟುಕಿದ್ದಾರೆ. 


Scroll to load tweet…