ಕಣಕ್ಕಿಳಿಯುವ ಮೊದಲೇ ಬಾಕ್ಸರ್ ಸೀಮಾಗೆ ಪದಕ..!

First Published 20, Feb 2018, 2:25 PM IST
Seema Punia assured of medal Sarita Devi enters quarters of Strandja Memorial boxing
Highlights

ಮಹಿಳೆಯರ 81 ಕೆಜಿ ವಿಭಾಗದಲ್ಲಿ ಕೇವಲ 3 ಬಾಕ್ಸರ್‌ಗಳು ಮಾತ್ರ ಇದ್ದು, ಪೂನಿಯಾ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸೋಫಿಯಾ (ಬಲ್ಗೇರಿಯಾ): ಭಾರತದ ಮಹಿಳಾ ಬಾಕ್ಸರ್ ಸೀಮಾ ಪೂನಿಯಾ, 69ನೇ ಸ್ಟಾರಂಡ್ಜಾ ಮೆಮೋರಿಯಲ್ ಬಾಕ್ಸಿಂಗ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಮೊದಲೇ ಪದಕ ಖಚಿತಪಡಿಸಿಕೊಂಡಿದ್ದಾರೆ.

ಮಹಿಳೆಯರ 81 ಕೆಜಿ ವಿಭಾಗದಲ್ಲಿ ಕೇವಲ 3 ಬಾಕ್ಸರ್‌ಗಳು ಮಾತ್ರ ಇದ್ದು, ಪೂನಿಯಾ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೆಮೀಸ್‌'ನಲ್ಲಿ ಸ್ಥಳೀಯ ಬಾಕ್ಸರ್ ಮಿಹೆಲ್ಲಾ ನಿಕೊಲೊವಾ ವಿರುದ್ಧ ಸೆಣಸಲಿದ್ದಾರೆ. ಇದೇ ವಿಭಾಗದಲ್ಲಿ ರಷ್ಯಾದ ಆ್ಯನಾ ಇವಾನೊವ್ ನೇರವಾಗಿ ಫೈನಲ್'ಗೆ ಪ್ರವೇಶ ಪಡೆದಿದ್ದಾರೆ.

ಇನ್ನು 60 ಕೆಜಿ ವಿಭಾಗದಲ್ಲಿ ಇಟಲಿಯ ಮಂಚೆಸ್‌'ರನ್ನು 3-2 ಅಂತರದಿಂದ ಮಣಿಸುವ ಮೂಲಕ ಎಲ್.ಸರಿತಾದೇವಿ ಕ್ವಾರ್ಟರ್‌'ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಮೊದಲ ದಿನ ಭಾರತ ಶುಭಾರಂಭ ಮಾಡಿದೆ.

loader