ಕಾಮೆಂಟರಿ ಬಾಕ್ಸ್ ಎಂದರೆ ಅಲ್ಲೊಂದಿಷ್ಟು ತಮಾಷೆ, ಕಾವೇರಿದ ವಾತಾವರಣ ಎಲ್ಲವೂ ಇರುತ್ತೆ. ನಿನ್ನೆಯ ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯದ ಸಂದರ್ಭ ಆಗಿದ್ದೂ ಇದೆ. ಭಾರತದ ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರೀ ಮತ್ತು ಸುನಿಲ್ ಗವಾಸ್ಕರ್ ಜೊತೆ ಕಾಮೆಂಟರಿ ಮಾಡುತ್ತಿದ್ದ ನ್ಯೂಜಿಲೆಂಡ್`ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟ್ಐರಿಸ್ ಮಧ್ಯದಲ್ಲೇ ಕಾಮೆಮಟರಿ ಬಾಕ್ಸ್`ನಿಂದ ಎದ್ದು ಹೊರನಡೆದಿದ್ದಾರೆ.

ಅಂದಹಾಗೆ, ಸ್ಟೈರಿಸ್ ಕಾಮೆಂಟರಿ ಬಾಕ್ಸ್`ನಿಂದ ಹೊರ ಹೋಗಲು ಕಾರಣ ಕೇದಾರ್ ಜಾಧವ್. ಕೇದಾರ್ ಜಾಧವ್ ವಿಕೆಟ್ ಪಡೆದರೆ ನಾನು ಕಾಮೆಂಟರಿ ಬಾಕ್ಸ್`ನಿಂದ ಹೊರ ಹೋಗುತ್ತೇನೆಂದು ಸ್ಟೈರಿಸ್ ಸವಾಲು ಹಾಕಿದ್ದರು. ಇದರ ಮಧ್ಯೆಯೇ ಕೇದಾರ್ ಜಾಧವ್, ಕೇನ್ ವಿಲಿಯಮ್ಸ್ ಎಲ್`ಬಿಡಬ್ಲ್ಯೂಗೆ ಅಂಪೈರ್`ಗೆ ಮನವಿ ಮಾಡಿದರು. ಕೂಡಲೇ ಅಂಪೈರ್ ಬೆರಳೆತ್ತಿ ವಟ್ ಎಂದು ತೀರ್ಪಿತ್ತರು. ಇದರಿಂದಾಗಿ ಮುಜುಗರಕ್ಕೊಳಗಾದ ಸ್ಟ್ಐರಿಸ್ ಕಾಮೆಂಟರಿ ಬಾಕ್ಸ್`ನಿಂದ ಹೊರ ನಡೆದರು.