565 ಕಿ.ಮೀ. ಸ್ಮ್ಯಾಶ್: ಬ್ಯಾಡ್ಮಿಂಟನ್ ತಾರೆ ಸಾತ್ವಿಕ್‌ಸಾಯಿರಾಜ್ ಗಿನ್ನಿಸ್ ದಾಖಲೆ!
* ಬ್ಯಾಡ್ಮಿಂಟನ್ ಸ್ಮ್ಯಾಶ್‌ನಲ್ಲಿ ಗಿನ್ನಿಸ್ ದಾಖಲೆ ಬರೆದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ
* ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಗಂಟೆಗೆ 565 ಕಿ.ಮೀ. ವೇಗದ ಸ್ಮ್ಯಾಶ್ ಬಾರಿಸಿ ದಾಖಲೆ
* ದಶಕದ ದಾಖಲೆ ಮುರಿದ ರಂಕಿರೆಡ್ಡಿ
ಸೊಕಾ(ಜು.19): ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಅತಿ ವೇಗದ ಸ್ಮ್ಯಾಶ್ ಬಾರಿಸಿದ ಪುರುಷರ ಶಟ್ಲರ್ ಎನ್ನುವ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಏಪ್ರಿಲ್ 14, 2023ರಂದು ಬ್ಯಾಡ್ಮಿಂಟನ್ ಉಪಕರಣಗಳ ತಯಾರಕ ಸಂಸ್ಥೆ ಯೋನೆಕ್ಸ್‌ನ ಫ್ಯಾಕ್ಟರಿ ಅಂಕಣದಲ್ಲಿ ನಿಯಂತ್ರಿತ ವಾತಾವರಣದಲ್ಲಿ ಗಿನ್ನಿಸ್ ದಾಖಲೆ ಪ್ರಯತ್ನ ನಡೆಸಲಾಯಿತು.
ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಗಂಟೆಗೆ 565 ಕಿ.ಮೀ. ವೇಗದ ಸ್ಮ್ಯಾಶ್ ಬಾರಿಸಿ, ದಶಕದ ದಾಖಲೆಯನ್ನು ಮುರಿದರು. 2013ರಲ್ಲಿ ಮಲೇಷ್ಯಾದ ಟಾನ್ ಬೂನ್ ಹಿಯೊಂಗ್ 493 ಕಿ.ಮೀ. ವೇಗದ ಸ್ಮ್ಯಾಶ್ ಬಾರಿಸಿದ್ದರು. ಮಹಿಳೆಯರ ವಿಭಾಗದಲ್ಲಿ ಮಲೇಷ್ಯಾದ ಟಾನ್ ಪಿಯರ್ಲಿ 438 ಕಿ.ಮೀ. ವೇಗದ ಸ್ಮ್ಯಾಶ್ ಬಾರಿಸಿ ಗಿನ್ನಿಸ್ ದಾಖಲೆಗೆ ಪಾತ್ರರಾದರು.
ಕೊರಿಯಾ ಓಪನ್: 2ನೇ ಸುತ್ತಿಗೆ ಸಾತ್ವಿಕ್-ಚಿರಾಗ್ ಜೋಡಿ
ಸೋಲ್: ಭಾರತದ ತಾರಾ ಶಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಇಲ್ಲಿ ಮಂಗಳವಾರ ಆರಂಭಗೊಂಡ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ 2ನೇ ಸುತ್ತಿಗೇರಿದ್ದಾರೆ. ಮೊದಲ ಸುತ್ತಿನಲ್ಲಿ ಭಾರತೀಯ ಜೋಡಿ ಥಾಯ್ಲೆಂಡ್‌ನ ಸುಪಾಕ್ ಜೊಮ್ಕೊ ಹಾಗೂ ಕಿಟ್ಟಿನುಪೊಂಗ್ ಕೆದ್ರೆನ್ ವಿರುದ್ಧ 21-16, 21-14 ನೇರ ಗೇಮ್‌ಗಳಲ್ಲಿ ಜಯಿಸಿತು. ಸಿಂಗಲ್ಸ್‌ನ ಪ್ರಧಾನ ಸುತ್ತು ಬುಧವಾರ ಆರಂಭಗೊಳ್ಳಲಿದೆ.
Wrestlers sexual harassment case: ಬ್ರಿಜ್‌ಭೂಷಣ್‌ಗೆ ತಾತ್ಕಾಲಿಕ ರಿಲೀಫ್..! ಮಧ್ಯಂತರ ಜಾಮೀನು ಮಂಜೂರು
ವಿಶ್ವ ರ‍್ಯಾಂಕಿಂಗ್: 17ನೇ ಸ್ಥಾನಕ್ಕೆ ಕುಸಿದ ಸಿಂಧು!
ನವದೆಹಲಿ: ಲಯದ ಸಮಸ್ಯೆ ಎದುರಿಸುತ್ತಿರುವ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು, ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಾಜಿ ವಿಶ್ವ ನಂ.2 ಸಿಂಧು, ಕೊನೆಯ ಬಾರಿಗೆ 17ನೇ ಸ್ಥಾನ ತಲುಪಿದ್ದು 2013ರ ಜನವರಿಯಲ್ಲಿ. 2016ರ ಏಪ್ರಿಲ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 2ನೇ ಸ್ಥಾನ ಪಡೆದಿದ್ದ ಸಿಂಧು, ಇತ್ತೀಚಿನ ವರೆಗೂ ಅಗ್ರ 10ರಲ್ಲೇ ಉಳಿದಿದ್ದರು.
ರಾಕೆಟ್ ಮುರಿದುಹಾಕಿದ ಜೋಕೋಗೆ 6.5 ಲಕ್ಷ ರುಪಾಯಿ ದಂಡ!
ಲಂಡನ್: ಇತ್ತೀಚೆಗೆ ಮುಕ್ತಾಯಗೊಂಡ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಫೈನಲ್ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ್ದ ನೋವಾಕ್ ಜೋಕೋವಿಚ್‌ಗೆ ಆಯೋಜಕರು ದಂಡ ಹಾಕಿದ್ದಾರೆ. ಕಾರ್ಲೋಸ್ ಆಲ್ಕರಜ್‌ಗೆ ಅಂಕ ಬಿಟ್ಟುಕೊಟ್ಟ ಸಿಟ್ಟಿನಲ್ಲಿ ತಮ್ಮ ರಾಕೆಟ್ ಅನ್ನು ನೆಟ್‌ನ ಕಂಬಕ್ಕೆ ಎಸೆದು ಹತಾಶ ಹೊರಹಾಕಿದ್ದ ಸರ್ಬಿಯಾ ಟೆನಿಸಿಗಗೆ ಆಯೋಜಕರು 8000 ಅಮೆರಿಕನ್ ಡಾಲರ್(ಅಂದಾಜು 6.5 ಲಕ್ಷ ರು.) ದಂಡ ಹಾಕಿದ್ದಾರೆ. ಇದು 2023ರಲ್ಲಿ ಆಟಗಾರನೊಬ್ಬನಿಗೆ ವಿಧಿಸಿದ ಅಧಿಕ ಮೊತ್ತದ ದಂಡ ಎನಿಸಿದೆ.
ಏಷ್ಯನ್ ಗೇಮ್ಸ್‌ಗೆ ಭಜರಂಗ್, ವಿನೇಶ್ ಫೊಗಟ್ ನೇರ ಆಯ್ಕೆ! ಇನ್ನುಳಿದ ಕುಸ್ತಿಪಟುಗಳಿಂದ ಆಸಮಾಧಾನ
ವನಿತಾ ಹಾಕಿ: ಭಾರತಕ್ಕೆ ಜರ್ಮನಿ ವಿರುದ್ಧ ಸೋಲು
ವೀಸ್ಬಡೆನ್(ಜರ್ಮನಿ): ಭಾರತ ಮಹಿಳಾ ಹಾಕಿ ತಂಡ ಜರ್ಮನಿ ಪ್ರವಾಸದಲ್ಲಿ ಸತತ 2ನೇ ಸೋಲು ಕಂಡಿದೆ. ತ್ರಿಕೋನ ಸರಣಿಯ 2ನೇ ಪಂದ್ಯದಲ್ಲಿ ಮಂಗಳವಾರ ಆತಿಥೇಯ ತಂಡದ ವಿರುದ್ಧ 1-4 ಗೋಲುಗಳಿಂದ ಪರಾಭವಗೊಂಡಿತು. ಮೊದಲ ಪಂದ್ಯದಲ್ಲಿ ತಂಡ ಚೀನಾಕ್ಕೆ ಶರಣಾಗಿತ್ತು. ಬುಧವಾರ 3ನೇ ಪಂದ್ಯದಲ್ಲಿ ಭಾರತ ಮತ್ತೆ ಜರ್ಮನಿ ವಿರುದ್ಧ ಸೆಣಸಲಿದೆ.
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅವಿನಾಶ್ ಸಾಬ್ಳೆ
ವಾರ್ಸಾ(ಪೋಲೆಂಡ್): ಭಾರತದ ತಾರಾ ಸ್ಟೀಪಲ್‌ಚೇಸ್ ಪಟು ಅವಿನಾಶ್ ಸಾಬ್ಳೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಭಾನುವಾರ ನಡೆದ ಸಿಲೆಸಿಯಾ ಡೈಮಂಡ್ ಲೀಗ್ ಕೂಟದಲ ಪುರುಷರ ವಿಭಾಗದ ಸ್ಪರ್ಧೆಯಲ್ಲಿ 8 ನಿಮಿಷ 11.63 ಸೆಕೆಂಡ್‌ಗಳಲ್ಲಿ ಕ್ರಮಿಸಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಮಟ್ಟ(8.15 ನಿಮಿಷ)ವನ್ನು ತಲುಪಲು ಸಾಬ್ಳೆ ಯಶಸ್ವಿಯಾದರು. ಇದೇ ವೇಳೆ ತಮ್ಮ ವೈಯಕ್ತಿಕ ಶ್ರೇಷ್ಠ ದಾಖಲೆಯನ್ನು ಮುರಿಯುವ ಅವಕಾಶವನ್ನು ಅವರು ಕಳೆದುಕೊಂಡರು. ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು 8 ನಿಮಿಷ 11.20 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ರಾಷ್ಟ್ರೀಯ ದಾಖಲೆಯಾಗಿಯೇ ಉಳಿದಿದೆ.