ಸರಿತಾ ಕೆಲ ದಿನಗಳಿಂದ ರೋಟಕ್‌'ನಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಬಾಕ್ಸಿಂಗ್ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

ನವದೆಹಲಿ(ಜ.14): ಮಾಜಿ ವಿಶ್ವ ಚಾಂಪಿಯನ್, ಭಾರತದ ಮಹಿಳಾ ಅನುಭವಿ ಬಾಕ್ಸರ್ ಎಲ್. ಸರಿತಾ ದೇವಿ, ಜ. 29ರಂದು ವೃತ್ತಿ ಬದುಕಿನ ಮೊದಲ ಪ್ರೊ ಬಾಕ್ಸಿಂಗ್‌'ನಲ್ಲಿ ಸೆಣಸಲು ಸಜ್ಜಾಗಿದ್ದಾರೆ.

ಈ ಮೂಲಕ ವಿಶ್ವ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಮಣಿಪುರದ ಇಂಫಾಲದಲ್ಲಿನ ಕುಮಾನ್ ಲಂಪಾಕ್ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಪ್ರೊ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸರಿತಾ ದೇವಿ, ಮೊದಲ ಫೈಟ್‌'ನಲ್ಲಿ ಹಂಗೇರಿಯ ಜ್ಸೋಫಿಯಾ ಬೆಡೊ ಅವರನ್ನು ಎದುರಿಸಲಿದ್ದಾರೆ. ಇದಕ್ಕಾಗಿ ಸರಿತಾ ಕೆಲ ದಿನಗಳಿಂದ ರೋಟಕ್‌'ನಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಬಾಕ್ಸಿಂಗ್ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.